ಇನ್ನೊಮ್ಮೆ ಈ ರೀತಿ ಪ್ರಶ್ನೆ ಕೇಳಬೇಡ ; ಭಾರತ ಹೆಸರು ಹೇಳುತ್ತಿದ್ದಂತೆ ಸಚಿವೆ ಹೆಬ್ಬಾಳ್ಕರ್ ಗರಂ ಆಗಿದ್ದೇಕೆ…?
ಬೆಳಗಾವಿ: ಭಾರತ ಜೋಡೋ Bharat ಮಾಡುವ ಕಾಂಗ್ರೆಸ್ ಭಾರತ ಹೆಸರಿಗೆ ವಿರೋಧ ಮಾಡ್ತಿದ್ದಾರಾ ಎಂಬ ಪ್ರಶ್ನೆಗೆ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Laxmi hebalkar ಗರಂ ಆದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆಗೆ ಒಂದು ವರ್ಷ ಆಗಿದೆ.ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ದೇಶ ಸುತ್ತಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಶಾಂತಿ ನೆಲಸಬೇಕು ಅಂತಾ ಭಾರತ್ ಜೋಡೋ Bharat Jodo ಯಾತ್ರೆ ಮಾಡಿದ್ದಾರೆ.ಇಂದಿಗೆ ಭಾರತ್ ಜೋಡೊ ಯಾತ್ರೆಗೆ ಒಂದು ವರ್ಷ ಹಿನ್ನೆಲೆ ಯಾತ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಶುಭ ಕೋರಿದರು.
ಭಾರತ ಹೆಸರಿನ ದೇಶಕ್ಕೆ ನಾವು ಯಾರು ವಿರೋಧ ಮಾಡಿಲ್ಲ. ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಾಂಗ್ರೆಸ್ ವರು ಹೋರಾಟ ಮಾಡಿದ್ದಾರೆ.ಕಾಂಗ್ರೆಸ್ Congress ಅನ್ನೋ ಪಕ್ಷ ಕಟ್ಟಿ ದೇಶಕ್ಕೆ ಭಾರತ ಅಂತಾ ಹೆಸರು ಇಟ್ಟಿದ್ದಾರೆ. ಇಂಡಿಯಾ ಹೆಸರು ವಿರೋಧ ಪಕ್ಷ ಇಟ್ಟುಕೊಂಡಿದ್ದಕ್ಕೆ ಇಷ್ಟುಬೇಗ ಹೆದರಿಕೆ ಸ್ಟಾರ್ಟ್ ಆಗಿದೆ.
ಅವರಿಗೆ ಹೆದರಿಕೆ ಇಲ್ಲ ಅಂತಾನೆ ಅಂದುಕೊಂಡ್ರು. ಮೋದಿಜಿ ಅವರದ್ದು ಬಹಳ ದೊಡ್ಡ ನಾಯಕತ್ವ ಇಷ್ಟಕ್ಕೆ ಅವರು ಹೆದರಿಬಿಟ್ರೇ ಹೇಗೆ?ಏನೇನೂ ಚೇಂಜ್ ಮಾಡ್ತಾರೆ ಹೇಳಿ ನೋಡೋಣ ಎಂದರು ಪ್ರಶ್ನಿಸಿದರು.
ಹತ್ತು ರೂಪಾಯಿ ಮೇಲೆ ಏನಂತ ಬರೆದಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿ ಅಂತಾ ನೋಟಿನ ಮೇಲೆ ಬರೆದಿದ್ದಾರೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Reserve Bank Of INDIA ಅನೋ ಹೆಸರನ್ನು ಚೇಂಜ್ ಮಾಡ್ತಾರಾ ಬಿಜೆಪಿ ನಾಯಕರಿಗೆ ಹೆಬ್ಬಾಳ್ಕರ್ ಪ್ರಶ್ನಿಸಿದರು. ನಾವ್ಯಾರು ಭಾರತ ಹೆಸರಿಗೆ ವಿರೋಧ ಮಾಡಿದ್ದೇವೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ.
ಇನ್ಮೇಲೆ ಇಂತಹ ಪ್ರಶ್ನೆ ಕೇಳಬೇಡಿ ಅಂತಾ ಮಾಧ್ಯಮಗಳ ಗರಂ ಆದರು. ಭಾರತ ಇಂತಹ ಮಟ್ಟಕ್ಕೆ ಬರಲು ಕಾಂಗ್ರೆಸ್ ತ್ಯಾಗ ಬಲಿದಾನವಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


