Select Page

Advertisement

ಮೊಬೈಲ್ ಚಾರ್ಜರ್ ಕಚ್ಚಿ 8 ತಿಂಗಳ ಮಗು ಸಾವು

ಮೊಬೈಲ್ ಚಾರ್ಜರ್ ಕಚ್ಚಿ 8 ತಿಂಗಳ ಮಗು ಸಾವು

ಕಾರವಾರ : ಮೊಬೈಲ್ ಚಾರ್ಜರ್ ವಯರ್ ಕಚ್ಚಿದ ಪರಿಣಾಮ ಕರೆಂಟ್ ಶಾಕ್ ತಗುಲಿ ಎಂಟು ತಿಂಗಳ ಮಗು ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ತಾಲೂಕಿನ ಸಿದ್ದರ ಗ್ರಾಮದ ಹೆಸ್ಕಾಂ ಹೊರಗುತ್ತಿಗೆ ನೌಕರ ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ಎಂಬುವವರ ದಂಪತಿ ಎಂಟು ತಿಂಗಳ ಮಗು ಸಾನಿಧ್ಯಾ ಸಾವನಪ್ಪಿದ್ದು.

ಪೋಷಕರು ಮೊಬೈಲ್‌ ಚಾರ್ಜ್ ಹಾಕಿ ವಯರ್ ಅನ್ನು ಕೆಳಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಾರ್ಜರ್ ಬಟನ್ ಆನ್ ಆಗಿದೆ. ಪುಟ್ಟ ಮಗು ಅರಿಯದೆ ವಯರ್ ಅನ್ನು ಬಾಯಲ್ಲಿ ಹಾಕಿ ಕಚ್ಚಿದೆ. ಈ ಸಂದರ್ಭದಲ್ಲಿ ಶಾಕ್ ತಗುಲಿದ್ದು ಮಗು ಸಾವನ್ನಪ್ಪಿದೆ.

ಕಾರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪುಟ್ಟ ಮಗು ಸಾವನ್ನಪ್ಪಿದ್ದ ಘಟನೆ ಹಿನ್ನಲೆಯಲ್ಲಿ ಮನೆಯಲ್ಲಿ ಪೋಷಕರು ಹಾಗೂ ಮಗುವಿನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ‌. ತಮ್ಮದಲ್ಲದ ತಪ್ಪಿಗೆ ಮಗು ಅನಾವಶ್ಯಕವಾಗಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಜನ ಕಣ್ಣೀರು ಹಾಕಿದರು.

Advertisement

Leave a reply

Your email address will not be published. Required fields are marked *

error: Content is protected !!