Select Page

Advertisement

ಇಟ್ಕೊಂಡವನ ಜೊತೆ ಸೇರಿ ಕಟ್ಕೊಂಡ ಗಂಡನನ್ನು ಕೊಂದು ಚೋರ್ಲಾಘಾಟ್ ಗೆ ಎಸೆದ ಮಹಿಳೆ

ಇಟ್ಕೊಂಡವನ ಜೊತೆ ಸೇರಿ ಕಟ್ಕೊಂಡ ಗಂಡನನ್ನು ಕೊಂದು ಚೋರ್ಲಾಘಾಟ್ ಗೆ ಎಸೆದ ಮಹಿಳೆ

ಬೆಳಗಾವಿ : ಮದುವೆಯಾಗಿ ಎರಡು ಮಕ್ಕಳಿದ್ದರೂ ಬೇರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಗಂಡನನ್ನು ಕೊಂದು ಆತನ ಶವವನ್ನು ಚೋರ್ಲಾಘಾಟ್ ಗೆ ಎಸೆದಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಮೃತ ವ್ಯಕ್ತಿಯ ಶವ ಹುಡುಕಾಟದಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ಬೆಳಗಾವಿಯ ಅಂಬೇಡ್ಕರ್ ನಗರದ ನಿವಾಸಿ
ರಮೇಶ ಕಾಂಬಳೆ ಎಂಬುವವರು ನಾಪತ್ತೆಯಾಗಿದ್ದಾರೆ ಎಂದು ಇವರ ಸಹೋದರ ರಾಜೇಶ್ ಕಾಂಬಳೆ ಎಂಬುವವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಪ್ರಿಲ್ 4 ರಂದು  ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಠಾಣೆ ಪಿಐ ಸುನೀಲ್ ಪಾಟೀಲ್ ಹಾಗೂ ತಂಡ ತನಿಖೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ  ಮೃತ ವ್ಯಕ್ತಿ ರಮೇಶ್ ಕಾಂಬಳೆ ಪತ್ನಿ ಹಾಗೂ ಆತನ ಗೆಳೆಯ ಬಾಳು ಬಿರಂಜೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ತಿಳಿದುಬಂದಿದೆ. ಪತ್ನಿ ಸಂಧ್ಯಾ ಕಾಂಬಳೆ ಅನೈತಿಕ ಸಂಬಂಧ ಪತಿಗೆ ಗೊತ್ತಾಗಿರುವ ಕಾರಣ ರಮೇಶ್ ಕಾಂಬಳೆ ಕೊಲೆಗೆ ಸಂಚು ರೂಪಿಸಲಾಗಿದೆ.

ಮೃತ ರಮೇಶ್ ಕಾಂಬಳೆ ಪತ್ನಿ ಸಂಧ್ಯಾ ಕಾಂಬಳೆ ಹಾಗೂ ಅನೈತಿಕ ಸಂಬಂಧ ಹೊಂದಿದ್ದ ಬಾಳು ಬಿರಂಜೆ, ಸೋನು ಮತ್ತು ನಿತೇಶ್ ಎಂಬುವವರು ಸೇರಿ ಕಲ್ಲಂಗಡಿ ಹಣ್ಣಿನ ಜ್ಯೂಸ್ ನಲ್ಲಿ ನಿದ್ರೆ ಮಾತ್ರೆ ಹಾಕಿ ರಮೇಶ್ ಕಾಂಬಳೆ ಕತ್ತಿಗೆ ನೈಲಾನ್ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗೋವಾ ಮಾರ್ಗದ ಚೋರ್ಲಾಘಾಟ್ ನಲ್ಲಿ ಎಸೆದು ಸುಮ್ಮನಾಗಿದ್ದಾರೆ.

ಸಧ್ಯ ಈ ಪ್ರಕರಣ ಭೇದಿಸುವಲ್ಲಿ ಬೆಳಗಾವಿ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದು ಮೃತ ರಮೇಶ್ ಕಾಂಬಳೆ ಶರೀರ ಹುಡುಕಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ಪಡೆಯಲಾಗಿದೆ. ಇನ್ನೂ ಮೃತ ವ್ಯಕ್ತಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಕೂಡಾ ನಡೆದಿವೆ.

Advertisement

Leave a reply

Your email address will not be published. Required fields are marked *

error: Content is protected !!