Select Page

Advertisement

BELAGAVI : ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿದ ಗ್ರಾಮಸ್ಥರು

BELAGAVI : ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿದ ಗ್ರಾಮಸ್ಥರು

ಬೆಳಗಾವಿ : ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಮಳೆಗಾಗಿ ರೈತರು ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಸುಣಧೋಳಿಯಲ್ಲಿ ನಡೆದಿದೆ.

ಈ ಬಾರಿ ಮುಂಗಾರು‌ ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ರೈತರು ಬೆಳೆದ ಬೆಳೆ ಹಾಳಾಗುತ್ತಿದೆ.‌ ಈ ಹಿನ್ನಲೆಯಲ್ಲಿ ಮಳೆರಾಯನಿಗಾಗಿ ಗ್ರಾಮಸ್ಥರು ಕತ್ತೆಗಳ‌‌ ಮದುವೆ ಮಾಡಿಸುವ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಅತ್ಯಂತ ವಿಜೃಂಭಣೆಯಿಂದ ನಡೆದ ಕತ್ತೆಗಳ ಮದುವೆ ಸಮಾರಂಭದ ನೇತೃತ್ವವನ್ನು ಶ್ರೀ ಗಜಾನನ ಯುವಕ ಸಂಘ, ಶ್ರೀ ಗಣೇಶ ನಗರ ಸುಣಧೋಳಿ ಕಿನಾಲ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ.  ಗ್ರಾಮದ ಹಟ್ಟಿ ಬಂದುಗಳು, ಹುಣಶ್ಯಾಳ ಬಂದುಗಳು, ಫಾಸಿ ಬಂದುಗಳು, ನಾಯ್ಕ್ ಬಂದುಗಳು, ಜಿದ್ದಿಮಣಿ ಬಂದುಗಳು ಮತ್ತು ಹಿರೇಮಠ ಬಂದುಗಳು ಸೇರಿದಂತೆ ಯುವಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ನ್ಯೂಸ್ ಸೋರ್ಸ – ಅವಿನಾಶ್ ಹಿರೇಮಠ

Advertisement

Leave a reply

Your email address will not be published. Required fields are marked *

error: Content is protected !!