Select Page

Advertisement

ಹೆಬ್ಬಾಳ್ಕರ್ ಗೆ ಮುಳುವಾಯ್ತ ಲಕ್ಷಣ ಸವದಿ ಎಂಟ್ರಿ?

ಹೆಬ್ಬಾಳ್ಕರ್ ಗೆ ಮುಳುವಾಯ್ತ ಲಕ್ಷಣ ಸವದಿ ಎಂಟ್ರಿ?

ಲಕ್ಷ್ಮಣ ಸವದಿ ಎಂಟ್ರಿ ಇಂದ ಹೆಬ್ಬಾಳ್ಕರ್ ಗೆ ಸಚಿವ ಸ್ಥಾನ ತಡವಾಗುತ್ತಿದೆಯಾ?

ಅನಾಯಾಸವಾಗಿ ಹೆಬ್ಬಾಳ್ಕರ್ ಅವರಿಗೆ ಸಿಗಬೇಕಾಗಿದ್ದ ಮಂತ್ರಿ ಸ್ಥಾನ ತಡವಾಗಿದ್ದು ಏಕೆ

ಬೆಳಗಾವಿ : ಸಿದ್ದರಾಮಯ್ಯ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಸಧ್ಯ ಸಚಿವಸಂಪುಟ ವಿಸ್ತರಣೆ ಕಸರತ್ತು ನಡೆಸುತ್ತಿದೆ. ಅನೇಕ ಶಾಸಕರು ಸಚಿವಸ್ಥಾನದ ಒಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಬೆಳಗಾವಿಯಿಂದ ಹಿರಿಯ ಶಾಸಕ ಸತೀಶ್ ಜಾರಕಿಹೊಳಿ ಮೊದಲ ಸುತ್ತಿನಲ್ಲಿಯೇ ಸಚಿವರಾಗಿ ಪ್ರಮಾಣವಚನ ಪಡೆದುಕೊಂಡಿದ್ದು ಇನ್ನುಳಿದ ಶಾಸಕರು ಪೈಪೋಟಿ ನಡೆಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದ ಪ್ರಭಾವಿ ಮಹಿಳಾ ನಾಯಕಿಯಾದ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದು ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಮೊದಲ ಸುತ್ತಿನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಿ ಪ್ರಮಾಣವಚನ ಪಡೆಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಹಾಗೂ ಜಿಲ್ಲೆಯ ಜನ ಇದ್ದರು ಈವರೆಗೂ ಸಾಧ್ಯವಾಗಿಲ್ಲ.

ಮಹಿಳಾ‌ ಕೋಟಾದಲ್ಲಿ ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಯ್ಕೆ ಕಸರತ್ತು ನಡೆಯುತ್ತಿದೆ. ಪ್ರಮುಖ ಕಾರಣವೆಂದರೆ ಈಗಾಗಲೇ ಬೆಳಗಾವಿಯಿಂದ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥನಾ ನೀಡಿದ್ದು ಇನ್ನೊಬ್ಬರಿಗೆ ನೀಡುವ ಸಾಧ್ಯತೆ ಇದೆ. ಆದರೆ ಈಗ ಬೆಳಗಾವಿಯಿಂದ ಲಿಂಗಾಯತ ಸಮುದಾಯದ ಒಬ್ಬರಿಗೆ ಮಂತ್ರಿ ಸ್ಥಾನ ಕೊಡುವತ್ತ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಟಿಕೆಟ್ ನಿರಾಕರಣೆಯಿಂದ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಡಿಸಿಎಂ ಲಕ್ಷಣ ಸವದಿ ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅತ್ತ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇಬ್ಬರಿಗೂ ಸಚಿವಸ್ಥಾನ ಕೊಡಬೇಕು ದಂಬುದು ಡಿಕೆ. ಶಿವಕುಮಾರ್ ವಾದವಾದರೆ, ಜಿಲ್ಲೆಯಲ್ಲಿ ಒಂದೇ ಸಮುದಾಯದ ಇಬ್ಬರಿಗೆ ಸ್ಥಾನ ಬೇಡ ಎಂಬುದು ಕಾಂಗ್ರೆಸ್ ಕೆಲ ಮುಖಂಡರ ವಾದವಾಗಿದೆ.

ಸಧ್ಯ ಅಥಣಿಯಲ್ಲಿ ಸ್ಪರ್ಧಿಸಿ ಬೃಹತ್ ಅಂತರದ ಗೆಲುವು ಸಾಧಿಸುವ ಜೊತೆಗೆ ಕುಡಚಿ ಹಾಗೂ ಕಾಗವಾಡ‌ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಲಕ್ಷ್ಮಣ ಸವದಿಗೆ ಮಂತ್ರಿಸ್ಥಾನ ಕೊಡಬೇಕಾದ ಇತ್ತಡ ಕಾಂಗ್ರೆಸ್ ನಲ್ಲಿದೆ. ಆದರೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಬೆಳಗಾವಿಯಿಂದ ಒಬ್ಬರು ಲಿಂಗಾಯತರಿಗೆ ಸಚಿವಸ್ಥಾನ ಕೊಡುವುದಕ್ಕೆ ಒಪ್ಪದ ಕಾರಣದಿಂದ ಸವದಿ ಕಾಂಗ್ರೆಸ್ ಸೇರ್ಪಡೆ ಹೆಬ್ಬಾಳ್ಕರ್ ಅವರಿಗೆ ಸಚಿವಸ್ಥಾನ ಸರಳವಾಗಿ ಸಿಗದೆ ಕೆಲ ಕಗ್ಗಂಟಾಯ್ತಾ ಎಂಬುದು ರಾಜಕೀಯ ಲೆಕ್ಕಾಚಾರ.

Advertisement

Leave a reply

Your email address will not be published. Required fields are marked *

error: Content is protected !!