ಪಕ್ಷಕ್ಕೆ ದ್ರೋಹ ಎಸಗಿದ ಸವದಿಯನ್ನು ಸೋಲಿಸಿ – ಶಾ ಕರೆ
ಅಥಣಿ : ಸೋತ ವ್ಯಕ್ತಿಯನ್ನು ಬಿಜೆಪಿ ಪಕ್ಷ ಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಹುದ್ದೆ ನೀಡಿತ್ತು. ಆದರೆ ಲಕ್ಷ್ಮಣ ಸವದಿ ಬಿಜೆಪಿ ಪಕ್ಷಕ್ಕೆ ಹಾಗೂ ಸಿದ್ಧಾಂತಕ್ಕೆ ದ್ರೋಹ ಎಸಗಿ ಕಾಂಗ್ರೆಸ್ ಸೇರಿದ್ದು ಅವರನ್ನು ಈ ಬಾರಿ ಅಥಣಿ ಜನ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಅಮಿತ್ ಶಾ ಗುಡುಗಿದರು.
ಶನಿವಾರ ಪಟ್ಟಣದ ಬೋಜರಾಜ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಇವರು. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಠಳ್ಳಿ ಬಿಜೆಪಿ ಸೇರುವ ಸಂದರ್ಭದಲ್ಲಿ ನಾನೇ ಸವದಿ ಜೊತೆ ಮಾತನಾಡಿದ್ದೆ. ನನ್ನನ್ನು ಎಂಎಲ್ಸಿ ಮಾಡಿ ಎಂದು ಕೇಳಿದ್ದರು. ನಂತರ ಅವರನ್ನು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದ್ದರು ಪಕ್ಷಕ್ಕೆ ದ್ರೋಹ ಎಸಗಿ ಕಾಂಗ್ರೆಸ್ ಸೇರಿದ್ದು ಈ ಬಾರಿ ಜನ ಸೋಲಿಸುವ ಮೂಲಕ ಉತ್ತರ ಕೊಡಬೇಕು ಎಂದರು.
ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ ಅಮಿತ್ ಶಾ. ಕಿತ್ತೂರು ಕರ್ನಾಟಕ ಭಾಗದಲ್ಲಿ ಅನೇಕ ನೀರಾವರಿ ಯೋಜನೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೀಡಿದೆ. ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ಆದರೆ ಕಾಂಗ್ರೆಸ್ ರೈತರಿಗೆ ಸುಳ್ಳು ಭರವಸೆ ನೀಡಿದ್ದು ಬಿಟ್ಟರೆ ಏನು ಮಾಡಿಲ್ಲ ಎಂದರು.


