ಬೆಳಗಾವಿ : ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಕೈಗೆ ಅಧಿಕಾರ ಕೊಡುವುದೇ ನನ್ನ ಮುಂದಿನ ಗುರಿ ಎಂದು ಹೇಳಿದ್ದ ಅಂದಿನ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ‌ಇಂದು ರಾಜ್ಯದ ಮುಖ್ಯಮಂತ್ರಿ. ಈಗಾಗಲೇ ಅನೇಕ ಕಡೆ ಪಕ್ಷದ ಪ್ರಾಮಾಣಿಕ ಸೇವಕರನ್ನು ಗುರುತಿಸಿ ಉನ್ನತ ಹುದ್ದೆ ನೀಡಿದ್ದು, ಉಳಿದ ನಿಗಮಮಂಡಳಿ ಸೇರಿ ಕೆಲ ಪ್ರಮುಖ ಹುದ್ದೆಗಳನ್ನು ನಿಷ್ಠಾವಂತ ನಾಯಕರಿಗೆ ಕೊಡುವ ಕುರಿತು ಸಿದ್ಧತೆ ನಡೆಸಿದ್ದಾರೆ.

ಹೌದು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇನ್ನೇನು ಅಥಣಿ ಕೇಂತ್ರದ ಕಾಂಗ್ರೆಸ್ ಅಭ್ಯರ್ಥಿ ಇವರೇ ಎಂದು ಪಕ್ಷದ ಹಿರಿಯರು ನಿರ್ಧರಿಸಿದ್ದ ಸಂದರ್ಭದಲ್ಲಿ ಲಕ್ಷ್ಮಣ ಸವದಿಯವರ ಅನಿರೀಕ್ಷಿತ ಆಗಮನದ ಕಾರಣಕ್ಕೆ ಇವರು ತಮ್ಮ ಅವಕಾಶವನೇ ತ್ಯಾಗ ಮಾಡಿದರು. ಜೊತೆಗೆ ಡಿ.ಕೆ. ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಮಾತಿಗೆ ತಿರುಮಾತನಾಡದೆ ಸಿಗಬೇಕಿದ್ದ ಅವಕಾಶ ಬಿಟ್ಟುಕೊಟ್ಟವರು ಇವರೇ ಗಜಾನನ ಮಂಗಸೂಳಿ.

ಮಹೇಶ್ ಕುಮಠಳ್ಳಿ ಕಾಂಗ್ರೆಸ್ ತೊರೆದಾಗಿನಿಂದಲೂ ಪಕ್ಷ ಸಂಘಟನೆ : ಅದು 2018 ರ ಕಾಲಘಟ್ಟ. ಅಥಣಿಯಲ್ಲಿ ಸವದಿ ವಿರುದ್ಧ ಗೆಲ್ಲಲೇ ಬೇಕು ಹಠ ಹಿಡಿದು ಈ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಸೋಲಿನ ರುಚಿ ತೋರಿಸಿ ಮಹೇಶ್ ಕುಮಠಳ್ಳಿ ಕಾಂಗ್ರೆಸ್ ನಿಂದ ಗೆಲ್ಲಿಸಿದರು. ಈ ಸಂದರ್ಭದಲ್ಲಿ ಹಗಲಿರುಳು ದುಡಿದವರು ಗಜಾನನ ಮಂಗಸೂಳಿ. ಪಕ್ಷದಿಂದ ಯಾವುದೇ ಪ್ರತಿಫಲ ಭಯಸದೆ ನಿರಂತರ ಸೇವೆ ಮಾಡುತ್ತಿರುವವರು ಇವರು.

ಇದಾದ ನಂತರ 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಹೇಶ್ ಕುಮಠಳ್ಳಿ ಅಥಣಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಘಾತ ನೀಡಿದ್ದರು. ಈ ವೇಳೆ ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತವರೇ ಗಜಾನನ ಮಂಗಸೂಳಿ. ಪ್ರವಾಹ, ಬೀಕರ ಕೊರೋಣ ರೋಗ ಸೇರಿದಂತೆ ಜನ ಸಂಕಷ್ಟಕ್ಕೆ ಸಿಲುಕಿದಾಗ ಕೈಯಿಂದ ಖರ್ಚು ಮಾಡಿ ಜನಸೇವೆ ಮಾಡಿದವರು. ಇದೇ ವೇಳೆ 2019 ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷ ಹೇಳಿದ ಕೆಲಸವನ್ನು ಚಾಚು ತಪ್ಪದೆ ನಿರ್ವಹಿಸಿದರು.

ಉಪ ಚುನಾವಣೆ ನೆಪ ಮಾತ್ರ ; 2023 ರಲ್ಲಿ ತ್ಯಾಗ : ಉಪ ಚುನಾವಣೆಯಲ್ಲಿ ಪಕ್ಷದ ನಿರ್ದೇಶನದಂತೆ ಚುನಾವಣೆ ಸ್ಪರ್ಧಿಸಿದ ಗಜಾನನ ಮಂಗಸೂಳಿ ಆಡಳಿತಾರೂಢ ಬಿಜೆಪಿಗೆ ಸರಿಯಾಗಿ ಟಕ್ಕರ್ ಕೊಟ್ಟರು. ಇದಾದ ನಂತರ ಇನ್ನೇನು 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಗಸೂಳಿ ಅವರೇ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಪೈನಲ್ ಎನ್ನುವ ಹೊತ್ತಲ್ಲೇ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾದರು. ಹೈಕಮಾಂಡ್ ‌ಮಟ್ಟದ‌ ನಿರ್ಧಾರದ ಹಿನ್ನಲೆಯಲ್ಲಿ ಗಜಾನನ ಮಂಗಸೂಳಿ ಪಕ್ಷದ ಮುಖಂಡರು ಸೂಚನೆಯಂತೆ ತಿರು ಮಾತನಾಡದೇ ತಮ್ಮ ಸ್ಥಾನವನ್ನು ಸವದಿಗೆ ತ್ಯಾಗ ಮಾಡಿದರು.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಗಜಾನನ ಮಂಗಸೂಳಿ ಅವರಿಗೆ ಈ ಬಾರಿ ಕಾಂಗ್ರೆಸ್ ಉನ್ನತ ಮಟ್ಟದ ಸ್ಥಾನ ಕಲ್ಪಿಸಬೇಕೆಂದು ಅವರ ಅಭಿಮಾನಿ ಬಳಗ ನಿರಂತರವಾಗಿ ಆಗ್ರಹಿಸುತ್ತಿದೆ. ಜೊತೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ‌ ನಾಯಕರು ಗಜಾನನ ಮಂಗಸೂಳಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ವಿಶ್ವಾಸ ಇದೆ ಎಂದು ಅಭಿಮಾನಿಗಳ ಆಶಯವಾಗಿದೆ.