ಮೈಸೂರು : ನನಗೆ 100 ವರ್ಷ ಬದುಕುವ ಆಸೆ ಇದೆ, ನಾನು ನೂರು ವರ್ಷ ಬದುಕುತ್ತೇನೆ. ಆದರೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಅವರು 125 ವರ್ಷಗಳ ಕಾಲ ಬದುಕಲಿ (Mysuru) ಮತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾರೈಸಿದ್ದಾರೆ.

ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವೀರಪ್ಪ ಮೊಯ್ಲಿ ಅವರ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಆಯುಷ್ಯದ ಕುರಿತು ಸ್ನೇಹಿತರ ಮಾತುಗಳನ್ನಾಡಿದರಲ್ಲದೆ, ಕನ್ನಡ ಭಾಷೆಯ ಸದ್ಯದ ಪರಿಸ್ಥಿತಿಯ ಬಗ್ಗೆ ಗಂಭೀರ ವಿಚಾರಗಳನ್ನು ಹಂಚಿಕೊಂಡರು.

ಆಯುಷ್ಯದ ಬಗ್ಗೆ ಹಾಸ್ಯ, ಸಾಹಿತ್ಯದ ಬಗ್ಗೆ ಪ್ರೀತಿ
ವೀರಪ್ಪ ಮೊಯ್ಲಿ ಅವರು ನೂರಲ್ಲ, 125 ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಬೇಕೆಂದು ಬಯಸಿದರು. ಜೊತೆಗೆ ಅವರಿಗೆ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ‘ಜ್ಞಾನಪೀಠ’ ಪ್ರಶಸ್ತಿ ಸಿಗಬೇಕು ಎಂದು ಸಿದ್ದರಾಮಯ್ಯ ಆಶಿಸಿದರು. ತಮಗೂ ನೂರು ವರ್ಷ ಬದುಕುವ ಇಚ್ಛೆಯಿದ್ದು, ಅಷ್ಟು ಕಾಲ ಬದುಕುತ್ತೇನೆ. ಆದರೆ ಆಯಸ್ಸು ನಮ್ಮ ನಿಯಂತ್ರಣದಲ್ಲಿ ಇಲ್ಲದ ಕಾರಣ ಏನನ್ನೂ ಹೇಳಲಾಗದು ಎಂದರು.