ಬೆಳಗಾವಿ : ಕಬ್ಬಿಗೆ ಈ ಬಾರಿ 3600 ದರ ಪಡೆಯಲು ಹರಸಾಹಸ ಪಡುವ ಸಂದರ್ಭದಲ್ಲಿ ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ ವರ್ಕ್ಸ್ ಲಿ. ಪ್ರತಿ ಟನ್ ಕಬ್ಬಿಗೆ 4000 ರೂ. ದರ ನಿಗದಿಪಡಿಸಿ ಘೋಷಣೆ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾರ್ಖಾನೆ ಮಳೆ ಅಭಾವ ಕಾರಣಕ್ಕೆ ಕಬ್ಬು ಇಳುವರಿ ಕುಂಠಿತಗೊಂಡಿದ್ದು. ಈ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 4 ಸಾವಿರ ದರ ನೀಡುವುದಾಗಿ ಘೋಷಣೆ ಮಾಡಿದೆ.

ಮೊದಲ ಕಂತಿನಲ್ಲಿ 3,700, ಎರಡನೇ ಕಂತಿನಲ್ಲಿ 100 ನಂತರ ಸಕ್ಕರೆ ದರ ಸರಾಸರಿ 50 ರೂ. ಇದ್ದರೆ 200 ರೂ. ಸೇರಿಸಿ ಒಟ್ಟು 4 ಸಾವಿರ ರೂ. ದರ ನೀಡಲು ಕಾರ್ಖಾನೆ ನಿರ್ಧರಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ತಿಳಿಸಿದ್ದಾರೆ.