ಬೆಳಗಾವಿ : ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಕಿಚ್ಚು ಎಲ್ಲೆಡೆ ವ್ಯಾಪಿಸಿದ್ದು, ಇಂದು ಜೈಲ್ ಭರೋ ಮಾಡಲು ರೈತರು ನಿರ್ಧರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ಪ್ರತಿಭಟನೆ ನಡೆಸದಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ವಿರುದ್ಧ ಆಕ್ರೋಶ ಹೊರಹಾಕಿರುವ ರೈತ ಮುಖಂಡರು, ರಾಜಕಾರಣಿಗಳು ಹೇಳಿದಂತೆ ಕೇಳುವ ಜಿಲ್ಲಾಧಿಕಾರಿ ಇನ್ನಾವುದೇ ಸೆಕ್ಷನ್ ಹಾಕಿ ಹೋರಾಟ ಹತ್ತಿಕ್ಕಿದರೂ ನಾವು ಕೇಳಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮನ್ನು ಬೇಕಾದರೆ ಬಂಧನ ಮಾಡಲಿ, ಕಬ್ಬು ಬೆಳೆಗಾರರನ್ನು ಬಂಧಿಸಿದ ಕುಖ್ಯಾತಿ ಸರ್ಕಾರಕ್ಕೆ ಬರುತ್ತದೆ. ನಮ್ಮ ಹೋರಾಟ ನಿಲ್ಲುವುದಿಲ್ಲ. ಜೈಲ್ ಭರೋ ಚಳುವಳಿಗೆ ಮೂಲಕ ಸ್ವಯಂ ಪ್ರೇರಿತ ಬಂಧನಕ್ಕೆ ಒಳಗಾಗುತ್ತೇವೆ ಎಂದು ರಾಜ್ಯ ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅಭಿಪ್ರಾಯಪಟ್ಟರು.




