ಬೆಳಗಾವಿ : ಕಬ್ಬು ಬೆಳೆಗಾರರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ ರಸ್ತೆ ಮಾರ್ಗಸೂಚಿ ಪ್ರಕಟಿಸಿದೆ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ರೈತರು ಮುಂದಾಗಿದ್ದಾರೆ. ನಿಪ್ಪಾಣಿ ಹೊರವಲಯ ಹಾಗೂ ಹತ್ತರಗಿ ಬಳಿ ರೈತರು ಹೆದ್ದಾರಿ ತಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಕೊಲ್ಹಾಪುರ – ಕಾಗಲ್ – ಅದಮಾಪುರ – ಗರಗೋಟೆ – ಗಡಿಂಗ್ಲಜ – ಆಜರಾ – ಚಂದಗಡ – ಶಿನ್ನೋಳಿ – ಬೆಳಗಾವಿ
ಧಾರವಾಡ – ಅಳ್ನಾವರ – ಖಾನಾಪುರ – ನಂದಗಡ – ಬೆಳಗಾವಿ








