ಬೆಳಗಾವಿ : ಕೇಂದ್ರ ಸರಕಾರದ ಜೊತೆ ಕಬ್ಬು ಬೆಳೆ ರೈತರ ಸಭೆ ವಿಫಲವಾಗಿದ್ದು ರಾಜ್ಯ ರೈತ ಸಂಘ ಹೆದ್ದಾರಿ ಬಂದ್ ಮಾಡಿ ಹೋರಾಟದ ಕರೆ ನೀಡಿದೆ.
ಈ ಕುರಿತು ರೈತ ಮುಖಂಡ ಚುನ್ನಪ್ಪ ಪೂಜಾರಿ ಪ್ರತಿಕ್ರಿಯೆ ನೀಡಿದ್ದು. ದೆಹಲಿಗೆ ಕರೆದು ಕೇಂದ್ರ ಸರಕಾರ ರೈತರಿಗೆ ಅವಮಾನ ಮಾಡಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಬ್ಬ ಮೋಸಗಾರ. ಎಂಎಸ್ ಪಿ ಘೋಷಿಸದೆ ರೈತರಿಗೆ ಅನ್ಯಾಯ ಮಾಡಿದೆ ಎಂದರು.
ದೆಹಲಿ ಸಭೆ ವಿಫಲವಾಗಿದೆ. ನಾಳೆಯಿಂದ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.





