ವಿಜಯಪುರ: ಭಾವೈಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೂ ರೈತ ಮುಖಂಡ ಶಶಿಕಾಂತ್ ಪಡಸಲಗಿ ಅವರಿಗೂ ಯಾವುದೇ ಅಧಿಕೃತ ಸಂಬಂಧವಿಲ್ಲ. ಅವರು ಮಠದ ಪೀಠಾಧಿಪತಿಯೂ ಅಲ್ಲ, ಮಠದ ಪ್ರತಿನಿಧಿಯೂ ಅಲ್ಲ ಎಂದು ಶ್ರೀ ಕ್ಷೇತ್ರ ಇಂಚಗೇರಿ ಮಠ ಸ್ಪಷ್ಟಪಡಿಸಿದೆ.

ಹುಬ್ಬಳ್ಳಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಶಶಿಕಾಂತ್ ಪಡಸಲಗಿ ನೀಡಿದ ಹೇಳಿಕೆ ಹಾಗೂ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇಂಚಗೇರಿ ಮಠದ ಹೆಸರು ಪ್ರಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಶ್ರೀಮಠ ಈ ಸ್ಪಷ್ಟನೆ ನೀಡಿದೆ.

ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ಮಠದ ಪರಂಪರೆ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ತಮ್ಮ ಭಕ್ತಿಭಾವ ವ್ಯಕ್ತಪಡಿಸುತ್ತಾರೆ. ಶಶಿಕಾಂತ್ ಪಡಸಲಗಿ ಅವರೂ ಮಠದ ಅನುಯಾಯಿಗಳಲ್ಲಿ ಒಬ್ಬರು ಅಷ್ಟೇ. ಅವರು ಶ್ರೀಮಠದ ಭಕ್ತರಾಗಿದ್ದು, ಮಠದ ಪೀಠಾಧಿಪತಿ, ಗುರೂಜಿ ಅಥವಾ ಅಧಿಕೃತ ಪ್ರತಿನಿಧಿಯಲ್ಲ. ಹೀಗಾಗಿ ಅವರ ವೈಯಕ್ತಿಕ ಹೇಳಿಕೆ, ಹೋರಾಟ ಅಥವಾ ಚಟುವಟಿಕೆಗಳನ್ನು ಶ್ರೀಮಠದ ನಿಲುವು ಅಥವಾ ಅಭಿಪ್ರಾಯವೆಂದು ಪರಿಗಣಿಸಬಾರದು ಎಂದು ಮಠದ ಪ್ರಕಟಣೆ ಸ್ಪಷ್ಟಪಡಿಸಿದೆ.

ಭಕ್ತರಲ್ಲಿ ಗೊಂದಲ ಬೇಡ:
ಶಶಿಕಾಂತ್ ಪಡಸಲಗಿ ಅವರು ಇಂಚಗೇರಿ ಮಠದ ಭಕ್ತರಲ್ಲಿ ಒಬ್ಬರು ಮಾತ್ರ. ಮಠಕ್ಕೂ ಅವರಿಗೂ ಯಾವುದೇ ಅಧಿಕೃತ ಸಂಬಂಧವಿಲ್ಲ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶ್ರೀಮಠಕ್ಕೆ ಲಕ್ಷಾಂತರ ಭಕ್ತರಿದ್ದು, ಶತಮಾನಗಳ ಗುರುಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ವೈಯಕ್ತಿಕ ಅಥವಾ ಸಂಘಟನಾತ್ಮಕ ಹೋರಾಟಗಳಿಗೆ ಮಠದ ಹೆಸರು ಹಾಗೂ ಶ್ರೀಗಳ ಭಾವಚಿತ್ರ ಬಳಸುವುದು ಸೂಕ್ತವಲ್ಲ ಎಂದು ಮಠ ತಿಳಿಸಿದೆ.

ಪ್ರತಿಭಟನೆ ಹಿನ್ನೆಲೆ:
ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿ, ಸಕ್ಕರೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಹಾಗೂ ಹೊಸ FRP ನಿಗದಿಗೆ ಆಗ್ರಹಿಸಿ ಶಶಿಕಾಂತ್ ಪಡಸಲಗಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪಡಸಲಗಿ ನೀಡಿದ್ದರೆನ್ನಲಾದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರೊಂದಿಗೆ ಇಂಚಗೇರಿ ಮಠದ ಹೆಸರನ್ನೂ ಜೋಡಿಸಿ ಚರ್ಚೆ ನಡೆದ ಹಿನ್ನೆಲೆಯಲ್ಲಿ ಮಠ ಸ್ಪಷ್ಟನೆ ನೀಡಿದೆ.

Statement
ಶಶಿಕಾಂತ್ ಪಡಸಲಗಿ ಅವರು ಶ್ರೀಮಠದ ಭಕ್ತರಲ್ಲಿ ಒಬ್ಬರು ಮಾತ್ರ. ಅವರು ಮಠದ ಪೀಠಾಧಿಪತಿಯೂ ಅಲ್ಲ, ಪ್ರತಿನಿಧಿಯೂ ಅಲ್ಲ. ವೈಯಕ್ತಿಕ ಅಥವಾ ಸಂಘಟನಾತ್ಮಕ ಹೋರಾಟಗಳಿಗೆ ಶ್ರೀಮಠದ ಹೆಸರು ಬಳಸುವುದು ಶೋಭೆಯಲ್ಲ.
•ಶ್ರೀ ಕ್ಷೇತ್ರ ಇಂಚಗೇರಿ ಮಠದ ಪ್ರಕಟಣೆ

ಮುಖ್ಯಾಂಶಗಳು

1. ಶಶಿಕಾಂತ್ ಪಡಸಲಗಿಗೆ ಇಂಚಗೇರಿ ಮಠದ ಅಧಿಕೃತ ನಂಟಿಲ್ಲ
2. ಶ್ರೀಮಠದಿಂದ ಸ್ಪಷ್ಟನೆ
3. ಭಕ್ತರಲ್ಲಿ ಗೊಂದಲ ಬೇಡ
4. ಮಠದ ಹೆಸರು ಬಳಸದಂತೆ ಎಚ್ಚರಿಕೆ
5. ಶತಮಾನಗಳ ಗುರುಪರಂಪರೆ ಇಂಚಗೇರಿ ಸಂಪ್ರದಾಯಕ್ಕಿದೆ

Box News
ಭಕ್ತಿ ಪಂಥದ ಶ್ರೀಕ್ಷೇತ್ರ ಇಂಚಗೇರಿ

* ಪೀಠಾಧಿಪತಿಗಳು: ಶ್ರೀ ಕ್ಷೇತ್ರ ಇಂಚಗೇರಿ ಮಠದ ಪೀಠಾಧಿಪತಿಗಳಾಗಿ ಶ್ರೀ ಸ.ಸ. ರೇವಣಸಿದ್ಧೇಶ್ವರ ಮಹಾರಾಜರು ಪೀಠದಲ್ಲಿದ್ದಾರೆ.
* ಐತಿಹಾಸಿಕ ಕ್ಷೇತ್ರ: ವಿಜಯಪುರ ಜಿಲ್ಲೆಯ ಚಡಚಣ (ಇಂಡಿ) ತಾಲ್ಲೂಕಿನ ಇಂಚಗೇರಿ ಗ್ರಾಮ ಭಕ್ತಿ ಪಂಥದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
* ಸ್ಥಳ: ವಿಜಯಪುರದಿಂದ ಸೋಲಾಪುರ ಮಾರ್ಗದಲ್ಲಿ ಹೊರ್ತಿ ಪಟ್ಟಣದಿಂದ ಸುಮಾರು 11 ಕಿ.ಮೀ. ದೂರದಲ್ಲಿದೆ.
* ಗುರು ಪರಂಪರೆ: ಶತಮಾನಗಳ ಸುದೀರ್ಘ ಹಾಗೂ ಪವಿತ್ರ ಗುರುಪರಂಪರೆಯ ಹಿನ್ನೆಲೆಯನ್ನು ಮಠ ಹೊಂದಿದೆ.
* ಶ್ರೀಮಠದ ಸಂದೇಶ: ಮಠದ ಹೆಸರನ್ನು ವೈಯಕ್ತಿಕ ಅಥವಾ ಸಂಘಟನಾತ್ಮಕ ಹೋರಾಟಗಳಿಗೆ ಬಳಸಬಾರದು.