ಬೆಳಗಾವಿ : ಗೋಕಾಕ ತಾಲೂಕಿನ ಘಟಪ್ರಭಾದ ಶ್ರೀ ಜೆ.ಜಿ. ಸಹಕಾರಿ ಸಂಘದ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಶೋಭಾ ಆರ್. ಇಟ್ನಾಳ್ ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಠ ಕಾಯಚಿಕಿತ್ಸಾ ಪಿಜಿ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.

ನವದೆಹಲಿಯ ಎನ್‌ಸಿಐಎಸ್‌ಎಂ ಮಾನ್ಯತೆ ಪಡೆದ ಆಯುರ್ವೇದ ಶಿಕ್ಷಕರ ಸಂಘ ವತಿಯಿಂದ ಆಯೋಜಿಸಿದ್ದ 8ನೇ ರಾಷ್ಟ್ರೀಯ ಸಮ್ಮೇಳನ ಅಟಾಕಾನ್-2026 ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಿತು.

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್‌ಸಿಐಎಸ್‌ಎಂ ಅಧ್ಯಕ್ಷೆ ಡಾ. ಮನೀಷಾ ಕೊಠೇಕರ್ ಹಾಗೂ ಬೋರ್ಡ್ ಆಫ್ ಆಯುರ್ವೇದದ ಡಾ. ಅಲ್ಲಂಪ್ರಭು ಅವರ ಸಮ್ಮುಖದಲ್ಲಿ ಡಾ. ಶೋಭಾ ಆರ್. ಇಟ್ನಾಳ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಯಚಿಕಿತ್ಸಾ ವಿಭಾಗದಲ್ಲಿ ಬೋಧನೆ, ಮಾರ್ಗದರ್ಶನ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ. ಶೋಭಾ ಆರ್. ಇಟ್ನಾಳ್ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಪ್ರಶಸ್ತಿಯು ಕಾಲೇಜು ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ.