ಬೆಳಗಾವಿ : ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಮೇಲೆ ಸಧ್ಯ ಕಾಂಗ್ರೆಸ್ ಶಾಸಕರ ಕಣ್ಣು ನೆಟ್ಟಿದೆ. ಇನ್ನೂ ನೂತನ ಸಚಿವರ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ಪಟ್ಟಿ ಸಿದ್ದಪಡಿಸಿದ್ದು ಇದರಲ್ಲಿ ಬೆಳಗಾವಿಯಿಂದ ಮೂವರ ಹೆಸರು ಕೇಳಿಬರುತ್ತಿವೆ.
ರಾಜ್ಯ ಕಾಂಗ್ರೆಸ್ ನಾಯಕರು ಸಂಭಾವ್ಯ ಸಚಿವಸ್ಥಾನದ ನಿರೀಕ್ಷೆ ಹೊಂದಿರುವ ಶಾಕಸರ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸಿದ್ದು ಇದರಲ್ಲಿ ಬೆಳಗಾವಿಯ ಮೂವರು ಶಾಸಕರ ಹೆಸರಿದೆ.
ಸಚಿವಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಬೆಳಗಾವಿಯ ಮೂವರು ಶಾಸಕರ ಹೆಸರನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಕಳುಹಿಸಿದ್ದು ಇದರಲ್ಲಿ ಯಾರ ಆಯ್ಕೆ ಆಗುತ್ತದೆ ಎಂಬ ಕುತೂಹಲ ಮನೆಮಾಡಿದೆ.
ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಥಣಿ ಶಾಸಕ ಲಕ್ಷ್ಮಣ ಸವದಿ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಅವರ ಹೆಸರನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸಲಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿವೆ.



