ಬೆಳಗಾವಿ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಥಣಿ ತಾಲೂಕಿಗೆ ಹೊಂದಿಕೊಂಡ ಜಮಖಂಡಿ ಭಾಗದಲ್ಲಿ ಚಿರತೆ ಪ್ರತ್ಯಕ್ಷ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಕಡೆ ಚಿರತೆ ಹಾವಳಿ ಸುದ್ದಿ ಕೇಳಿಬಂದಿದೆ.

ತಾಲೂಕಿನ ನಂದಗಾಂವ ಗ್ರಾಮದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ್ಯ ಆಗಿದ್ದು ಪಸಪ್ಪ ಪಡಸಲಿ ಎಂಬುವವರ ಆಡಿನ ಮರಿ ಕೊಂದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಸಧ್ಯ ಈ ಘಟನೆ ಕುರಿತು ಅಥಣಿ ವಲಯದ ಅರಣ್ಯ ಇಲಾಖೆ ಅಧಿಕಾರಿಯವರನ್ನು ಸಂಪರ್ಕಿಸಿದಾಗ. ಸಧ್ಯಕ್ಕೆ ಪ್ರಾಥಮಿಕ ಮಾಹಿತಿ ಪ್ರಕಾರ ಫೋಟೋ ಹಾಗೂ ಸ್ಥಳಕ್ಕೆ ಹೊಂದಿಕ್ಕೆ ಆಗುತ್ತಿಲ್ಲ.

ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತೇವೆ. ಪ್ರಾಣಿಯ ಕಾಲಿನ ಹೆಜ್ಜೆ ಗುರುತನ್ನು ಪರಿಶೀಲನೆ ನಡೆಸಿದ ನಂತರ ಕ್ಯಾಮೆರಾ ಅಳವಡಿಕೆ ಸೇರಿದಂತೆ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡುವವರೆಗೂ ಸುಳ್ಳು ವದಂತಿ ಹರಡಿಸದಂತೆ ಮನವಿ ಮಾಡಿದ್ದಾರೆ.