ಬೆಳಗಾವಿ : ಮಠದ ಸ್ವಾಮೀಜಿ ಮೇಲೆ ದುರುಳರು ಅಟ್ಟಹಾಸ ಮೆರೆದಿದ್ದು ಕ್ಷುಲ್ಲಕ ‌ಕಾರಣಕ್ಕೆ ಜಗಳ ಮಾಡಿದ್ದಲ್ಲದೆ ಸ್ವಾಮೀಜಿ ‌ಮೇಲೆ ಹಲ್ಲೆ ಮಾಡಿರುವ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಮಕನಮರಡಿಯ ಹುಣಸಿಕೊಳ್ಳಮಠದ ಶ್ರೀ ಸಿದ್ಧಬಸವ ಸ್ವಾಮೀಜಿ ಮೇಲೆ ಹಲ್ಲೆ ಮಾಡಲಾಗಿದೆ. ಮಠದ ಸುತ್ತಲಿನ ಪ್ರದೇಶವನ್ನು ಅನೈತಿಕ ಚಟುವಟಿಕೆ ತಾಣವಾಗಿಸಿಕೊಂಡಿದ್ದವರನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗ್ರಾಮದ ಮೇದಾರ ಕುಟುಂಬದ ಸದಸ್ಯರು ಮಠದ ಆವರಣದಲ್ಲಿ ಕಾರು ಹಚ್ಚಿದ್ದಾರೆ. ಈ ವೇಳೆ ರಾತ್ರಿ ಗೇಟ್ ತೆರೆಯುವ ವಿಚಾರವಾಗಿ ಜಗಳ ಪ್ರಾರಂಭವಾದ ವೇಳೆ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಆನಂದ ಮೇದಾರ, ರತ್ನಾ ಮೇದಾರ, ಮಂಜುನಾಥ, ಪ್ರವೀಣ್ ಮೇದಾರ ಸೇರಿ ಒಟ್ಟು 8 ಜನರ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.