Select Page

ಸಿಪಿಐ ಶ್ರೀಶೈಲ ಆತ್ಮಹತ್ಯೆಗೆ ಏನು ಕಾರಣ..? ಯಾಕೆ ಈ ನಿರ್ಧಾರ ಕೈಗೊಂಡ್ರು ಅಧಿಕಾರಿ..!

ಸಿಪಿಐ ಶ್ರೀಶೈಲ ಆತ್ಮಹತ್ಯೆಗೆ ಏನು ಕಾರಣ..? ಯಾಕೆ ಈ ನಿರ್ಧಾರ ಕೈಗೊಂಡ್ರು ಅಧಿಕಾರಿ..!



ಬೆಳಗಾವಿ : ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಯ ಸಿಪಿಐ ಶ್ರೀಶೈಲ ಚೌಗಲಾ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಉ‌ನ್ನತ ಹುದ್ದೆಯಲ್ಲಿದ್ದ ಅಧಿಕಾರಿ ಈ‌ ನಿರ್ಧಾರಕ್ಕೆ ಕಾರಣ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.

ಹೌದು ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ಶ್ರೀಶೈಲ ಚೌಗಲಾ ಅವರು ಬೆಂಗಳೂರು, ಶಿಗ್ಗಾವಿಯಲ್ಲಿ ಸೇವೆ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಬೆಳಗಾವಿಯ ಎಸ್‌ಡಿಆರ್‌ಎಫ್ ನಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬುಧವಾರ ಪದೋನ್ನತಿ ಪಡೆದಿದ್ದ ಅವರು ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ್ದರು. ಬುಧವಾರ ರಾತ್ರಿ ಊಟ ಮಾಡಿ ಕೋಣೆಗೆ ತೆರಳಿದ್ದರು.‌ ಈ ವೇಳೆ ಮಲಗಿರಬಹುದೆಂದು ಕುಟುಂಬದವರು ಭಾವಿಸಿದ್ದಾರೆ. ನಂತರ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಇವರ ಪತ್ನಿ

ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಸಿಪಿಐ ಶ್ರೀಶೈಲ ಚೌಗಲಾ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಸಿಪಿಐ ಶ್ರೀಶೈಲ ಸಾವಿಗೆ ಕಾರಣ : ಸಿಪಿಐ ಸಾವಿಗೆ ಹಣಕಾಸಿನ ‌ಸಮಸ್ಯೆ ಮೂಲ ಕಾರಣ ಎಂದು ಹೇಳಾಗುತ್ತಿದೆ. ಕಳೆದ ಕೆಲ ತಿಂಗಳಿನಿಂದಲೂ ಇವರು ಹಣಕಾಸು ವಿಚಾರವಾಗಿ ಸಾಕಷ್ಟು ನೊಂದಿದ್ದರು ಎಂಬ ಮಾಹಿತಿ ಲಭ್ಯಬಾಗಿದೆ.

ದೊಡ್ಡ ಮಟ್ಟದ ಹಣ ಹೊಂದಿಸುವ ವಿಚಾರವಾಗಿ ಇವರು ಮಾನಸಿಕ ನೆಮ್ಮದಿ ಹಾಳುಮಾಡಿಕೊಂಡಿದ್ದರು ಎಂಬುದು ಕೆಲವರ ಅಭಿಪ್ರಾಯ. ಇನ್ನೂ ಹಣ ಹೊಂದಿಸುವ ವಿಚಾರವಾಗಿ ಸಾಕಷ್ಟು ನೊಂದಿದ್ದರು ಎಂಬುದು ತಿಳಿದುಬಂದಿದೆ.

ಬುಧವಾರ ಪದೋನ್ನತಿ ಪಡೆದಿದ್ದ ಅವರು ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ್ದರು. ಇನ್ನೇನು ಹುದ್ದೆ ಅಲಂಕರಿಸಬೇಕು ಎನ್ನುವಷ್ಟರಲ್ಲಿ ಸಾವಿನ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರಿ ಸಾವಿಗೆ ಕುಟುಂಬ‌ ಹಾಗೂ ಸ್ನೇಹಬಳಗ ಕಂಬನಿ‌ ಮಿಡಿದಿದೆ.









Advertisement

Leave a reply

Your email address will not be published. Required fields are marked *

error: Content is protected !!