ಹೃದಯಾಘಾತ ; ಸಂತೋಷ ಕರೀಕಟ್ಟಿ ನಿಧನ
ಬೆಳಗಾವಿ : ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆ ಬೆಳಗಾವಿಯ ಜಾಹಿರಾತು ವಿಭಾಗದ ವ್ಯವಸ್ಥಾಪಕರಾಗಿದ್ದ ಸಂತೋಷ ಕರೀಕಟ್ಟಿ (49) ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ನಗರದ ಸದಾಶಿವನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.
ಮೃತರು ತಂದೆ, ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಈ ಹಿಂದೆ ಸಂತೋಷ್ ಅವರು ವಿಶ್ವವಾಣಿ ಪತ್ರಿಕೆಯ ಜಾಹಿರಾತು ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದ್ದರು. ಸದಾ ನಗುಮೊಗದ ವ್ಯಕ್ತಿತ್ವದವರಾಗಿದ್ದ ಕರೀಕಟ್ಟಿ ನಿಧನಕ್ಕೆ ಬೆಳಗಾವಿ ಪತ್ರಕರ್ತರ ಬಳಗ ಕಂಬನಿ ಮಿಡಿದಿದೆ.

