ಬೆಳಗಾವಿ : ಬಹು ನಿರೀಕ್ಷಿತ ಮಹಿಳಾ‌ ಮೀಸಲಾತಿ ಮಸೂದೆ ಇಂದು ಲೋಕಸಭೆಯಲ್ಲಿ ‌ಅಂಗಿಕಾರ ಆಗದೆ ಸೋಲು‌ ಅನುಭವಿಸಿದ್ದು ವಿರೋಧ ಪಕ್ಷಗಳ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷವು ಇಂದು ಮಹಿಳೆಯರ ಹಕ್ಕನ್ನು ಕಸಿದುಕೊಂಡು ದೇಶಕ್ಕೆ ಮಹಿಳಾ ವಿರೋಧಿ ಎನ್ನುವ ತನ್ನ ನಿಜವಾದ ಸ್ವರೂಪವನ್ನು ತೋರಿಸಿಕೊಟ್ಟಿದೆ ಎಂದು‌ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೊನಾಲಿ ಸರನೊಬತ್ ಆಕ್ರೋಶ ಹೊರಹಾಕಿದ್ದಾರೆ.

ಮಹಿಳಾ‌ ಮೀಸಲಾತಿ ಮಸೂದೆ ಅಂಗಿಕಾರಕ್ಕೆ‌ ಕೇಂದ್ರ ಸರಕಾರ ವಿಶೇಷ ಅಧಿವೇಶನ ಕರೆದಿತ್ತು. ಆದರೆ ಮಸೂದೆ ಪರ 278 ಮತ ಬಿದ್ದರೆ ಮಸೂದೆ ವಿರೋಧವಾಗಿ 211ಮತಗಳು ಬಿದ್ದವು. ಮೂರನೇ ಎರಡರಷ್ಟು ‌ಸದಸ್ಯ ಬಲ ಪಡೆಯಲು ವಿಫಲವಾಗಿದೆ.