ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಆರೋಪಿ ವಿನಯ್ ಕುಲಕರ್ಣಿ ಸೇರಿ 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ‌ಆದೇಶ ನೀಡಿದೆ.

2016 ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.‌ ಸಧ್ಯ ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.‌

ಪ್ತಕರಣದ ಇನ್ನೊಬ್ಬ ಆರೋಪಿ ಚನ್ನಕೇಶವ ಟಿಂಗರಿಕರ್ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನೂ ಮೃತ ಯೋಗೀಶ್ ಗೌಡ ಮಕ್ಕಳಿಗೆ 16 ಲಕ್ಷ ಪರಿಹಾರ ‌ನೀಡಲು ಕೋರ್ಟ್ ಆದೇಶ ನೀಡಿದೆ.

ಇನ್ನೂ ಕೋರ್ಟ್ ಆದೇಶ ಪ್ರತಿ ತಲುಪಿದ ನಂತರ ನಾಳೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನೂ ವಜಾ ಮಾಡುವ ಕುರಿತು ಸ್ಪೀಕರ್ ಚಿಂತನೆ ನಡೆಸಿದ್ದಾರೆ.