Select Page

Advertisement

ವೈಭವ್ ಆರ್ಭಟಕ್ಕೆ ಕಂಗಾಲಾದ RCB ; ರಾಜಸ್ಥಾನಕ್ಕೆ ಜಯ

ವೈಭವ್ ಆರ್ಭಟಕ್ಕೆ ಕಂಗಾಲಾದ RCB ; ರಾಜಸ್ಥಾನಕ್ಕೆ ಜಯ




ಗುವಾಹಟಿಯಲ್ಲಿ ನಡೆದ 16 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್- ಆರ್ ಸಿಬಿ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮಿಂಚಿದ್ದು, ರಾಜಸ್ಥಾನ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.

15ರ ಬಾಲಕ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌ ಅಬ್ಬರದ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸತತ 4ನೇ ಪಂದ್ಯ ಗೆದ್ದು, ಗೆಲುವಿನ ಓಟ ಮುಂದುವರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ಗಳಿಸಿತ್ತು. 202 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18 ಓವರ್ಗಳಲ್ಲಿ 4 ನಷ್ಟಕ್ಕೆ 202 ರನ್ ಗಳಿಸಿ ಗುರಿ ತಲುಪಿತು. ವೈಭವ್ ಸೂರ್ಯವಂಶಿ 78 ರನ್ಗಳಿಸಿದರೆ, ಧ್ರುವ್ ಜುರೆಲ್ ಅಜೇಯ 81 ರನ್ಗಳಿಸಿ ಗೆಲುವಿನ ರೂವಾರಿಗಳಾದರು.

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಅಬ್ಬರದ ಬ್ಯಾಟಿಂಗ್ ನಿಂದ ಐಪಿಎಲ್ 2026 ರಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ದಂತಕಥೆಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸದರು. ವೈಭವ್ ಸೂರ್ಯವಂಶಿ 353.33 ಸ್ಟ್ರೈಕ್ ರೇಟ್ ನೊಂದಿಗೆ 78 ರನ್ ಗಳಿಸಿದ್ದನ್ನು ವಿಶ್ಲೇಷಕರು ಆಶ್ಚರ್ಯಚಕಿತರಗಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಆರಂಭದಲ್ಲಿ ಆರ್‌ಸಿಬಿ ತಂಡ ಲಯ ಕಳೆದುಕೊಂಡು ಪದೇ ಪದೇ ವಿಕೆಟ್‌ ಕಳೆದುಕೊಂಡಿತು. ಪವರ್‌ಪ್ಲೇನಲ್ಲಿ ಬೆಂಗಳೂರಿನ ಅಗ್ರ ಕ್ರಮಾಂಕ ಕುಸಿಯಿತು. ಸಾಲ್ಟ್ ಮತ್ತು ಪಡಿಕ್ಕಲ್ ನಂತರ ವಿರಾಟ್ ಕೊಹ್ಲಿ ಕೂಡ ಕ್ಲೀನ್‌ ಬೋಲ್ಡ್‌ ಆಗಿ ಔಟಾದರು.

ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 32 ರನ್‌ಗಳಿಗೆ ಔಟಾದರು, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಪಂದ್ಯದಲ್ಲಿ ಟಿಮ್ ಡೇವಿಡ್ ಅತಿ ಬೇಗ ಔಟಾಗಿದ್ದು, ಆರ್‌ಸಿಬಿ ಅಭಿಮಾನಿಗಳಿ ನಿರಾಶೆ ಉಂಟು ಮಾಡಿತ್ತು. ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ (63 ರನ್) ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು

Advertisement

Leave a reply

Your email address will not be published. Required fields are marked *

error: Content is protected !!