ಡಿವೈಎಸ್ಪಿ ಮೇಲೆ ಕೈ ಎತ್ತಿದ ಸಂಘಟನೆ ಮುಖಂಡರು ; ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ
ಬೆಳಗಾವಿ : ಬೈಲಹೊಂಗಲದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಬೈಲಹೊಂಗಲ ಬಂದ್ ಸಮಯದಲ್ಲಿ ಪ್ರತಿಭಟನಾಕಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಚೆನ್ನಮ್ಮಾಜಿ ಐಕ್ಯ ಸ್ಥಳವನ್ನು ಅಭಿಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆ ಹಾಗೂ ಪಕ್ಷಗಳ ನಾಯಕರು ಬೈಲಹೊಂಗಲ ಬಂದಗೆ ಕರೆ ಸೋಮವಾರ ನೀಡಿದ್ದರು. ಈ ವೇಳೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿರುವ ತಾಲೂಕ ಆಡಳಿತ ಸೌಧದ ಮುಂಭಾಗದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಹಾಗೂ ವಿವಿಧ ಸರ್ಕಾರಿ ಕಚೇರಿಗಳಿರುವ ತಾಲ್ಲೂಕು ಆಡಳಿತ ಸೌಧದ ಗೇಟ್ ಹಾಕಲು ಮುಂದಾದರು. ಈ ವೇಳೆ ಬೈಲಹೊಂಗಲ ಡಿವೈಎಸ್ಪಿ ಅವರು ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ತಮ್ಮ ಪ್ರತಿಭಟನೆಗೆ ಯಾರ ವಿರೋಧವು ಇಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ತಿಳಿಸಿದರು.
ಆದರೆ ಡಿವೈಎಸ್ಪಿ ಅವರ ಮಾತನ್ನು ಗನನೆಗೆ ತೆಗೆದುಕೊಳ್ಳದ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಹಾಗೂ ತಾಲ್ಲೂಕು ಆಡಳಿತ ಸೌಧವನ್ನು ಬಂದ್ ಮಾಡಲು ಮುಂದಾದರು. ಈ ವೇಳೆ ತಡೆಯಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದಲ್ಲದೆ ನೂಕಾಟವನ್ನು ನಡೆಸಲಾಯಿತು. ಇದರಿಂದ ಕೆರಳಿದ ಖಾಕಿ ಪಡೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.
ಇದಕ್ಕೆ ಕೆಲವರು ಮೊಂಡುವಾದನ್ನು ಪ್ರದರ್ಶಿಸಿದರು. ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಲು ಮುಂದಾಗುತ್ತಿರುವುದನ್ನು ಗಮನಿಸಿದ ಪೊಲೀಸ್ ಕೆಲವು ಸಮಯದ ಕಾಲ ಸಹನೆಯಿಂದ ಮನವೊಲಿಸಲು ಮುಂದಾದರೂ ಉದ್ದಟನ ತೊರಿರುವುದರಿಂದ ಪೊಲೀಸರ ತಾಳ್ಮೆಯ ಕಟ್ಟೆ ಒಡೆಯಿತು. ಈ ವೇಳೆ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ನೂಕಾಟ ಮತ್ತು ತಳ್ಳಾಟ ನಡೆದಿದ್ದರಿಂ ಪ್ರತಿಭಟನಾಕಾರರು ಕರ್ತವ್ಯ ನಿರತ ಡಿವೈಎಸ್ಪಿ ಸಮವಸ್ತ್ರದ ಮೇಲೆ ಕೈ ಹಾಕುವ ಮೂಲಕ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಪುಂಡರಿಗೆ ಪೊಲೀಸ್ ಎಂದರೆ ಭಯ ಹಾಗೂ ಗೌರವ ಇಲ್ಲ. ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದು ಪ್ರಶ್ನಿಸುತ್ತಿದ್ದಾರೆ. ಕರ್ತವ್ಯ ನಿರತ ಪೊಲೀಸರನ್ನು ಸಾರ್ವಜನಿಕ ಸ್ಥಳದಲ್ಲಿ ಅಗೌರವ ತೋರಿರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ವೇಳೆ ಉದ್ದಟತನ ತೊರಿದ ಹೋರಾಟಗಾರರನ್ನು ವಶಕ್ಕೆ ಪಡೆದು ತಿಳಿಹೇಳಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.


