Select Page

Advertisement

ಜೈಲು ಪಾಲಾದ ಬಿಜೆಪಿ ಶಾಸಕ ; ಉಚ್ಚಾಟನೆ ಮಾಡುತ್ತಾ ಹೈಕಮಾಂಡ್..?

ಜೈಲು ಪಾಲಾದ ಬಿಜೆಪಿ ಶಾಸಕ ; ಉಚ್ಚಾಟನೆ ಮಾಡುತ್ತಾ ಹೈಕಮಾಂಡ್..?

ಬೆಂಗಳೂರು : ಗುತ್ತಿಗೆದಾರನಿಂದ ಕಮಿಷನ್ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾದೀಶರು ಶಾಸಕ ಚಂದ್ರು ಲಮಾಣಿ, ಆಪ್ತ ಸಹಾಯಕ ಗುರು ನಾಯ್ಕ್ ಹಾಗೂ ಮಂಜುನಾಥ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಶನಿವಾರ ಲಕ್ಷ್ಮೇಶ್ವರ ಪಟ್ಟಣದ ಸ್ವಂತ ಆಸ್ಪತ್ರೆಯಲ್ಲಿ 5 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.‌

ಈ ಪ್ರಕರಣದಿಂದ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ ಹೈಕಮಾಂಡ್ ವರದಿ ಕೇಳಿದೆ. ಕಾಂಗ್ರೆಸ್ ಪಕ್ಷ ಈ ಪ್ರಕರಣ ನಡೆಯುತ್ತಿದ್ದಂತೆ ಬಿಜೆಪಿ ಮೆಲೆ ಮುಗಿಬಿದ್ದಿದ್ದು ಶೀಘ್ರದಲ್ಲೇ ಹೈಕಮಾಂಡ್ ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ.

Advertisement

Leave a reply

Your email address will not be published. Required fields are marked *

error: Content is protected !!