ಗರ್ಭಿಣಿ ಫೋಟೋ ಶೂಟ್ ವೇಳೆ ಅವಘಡ ; ಮೊದಲ ಮಗು ಸಾವು
ನೆಲಮಂಗಲ : ಗರ್ಭಿಣಿ ಫೋಟೊ ಶೂಟ್ (Maternity Photoshoot) ವೇಳೆ ಆಟವಾಡುತ್ತಿದ್ದ ಮೊದಲ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ಮಗುವನ್ನು ಲಕ್ಷ್ಮೀರ್ (3) ಸಾವನ್ನಪ್ಪಿದ ಮಗು ಎಂದು ತಿಳಿದು ಬಂದಿದೆ. ಎಂಟು ತಿಂಗಳ ಗರ್ಭಿಣಿಯ ಫೋಟೋ ಶೂಟ್ ಮಾಡಿಸಲು ದಂಪತಿ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ನೀರಿನ ತೊಟ್ಟಿಗೆ ಬಿದ್ದು ಮೊದಲ ಮಗು ಸಾವನ್ನಪ್ಪಿದೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನಿಸಲಾಗಿದೆ.


