Select Page

Advertisement

ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಪತ್ತೆ ; ಹೆಚ್ಚಿದ ಅನುಮಾನ…!

ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಪತ್ತೆ ; ಹೆಚ್ಚಿದ ಅನುಮಾನ…!

ಬೈಲಹೊಂಗಲ:ತಾಲೂಕಿನ ನಯಾನಗರ ಸಮೀಪದ ಮಲಪ್ರಭಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ಮೂರು ದ್ವಿಚಕ್ರ ವಾಹನಗಳು ಪತ್ತೆಯಾಗಿರುವ ಘಟನೆ ಸಂಶಯಕ್ಕೆ ಕಾರಣವಾಗಿದೆ.

ಯಾರೋ ದುಷ್ಕರ್ಮಿಗಳು ಮೂರು ಬೈಕ್‌ಗಳನ್ನು ತಂದು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸಮಾಜಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಅವರ ಗೆಳೆಯರ ಬಳಗ ನದಿಗೆ ಇಳಿದು ಸುಮಾರು ಎರಡು ಗಂಟೆಗಳ ಕಾಲ ಶ್ರಮಪಟ್ಟು ಕಾರ್ಯಾಚರಣೆ ನಡೆಸಿ, ನದಿಯಲ್ಲಿ ಮುಳುಗಿದ್ದ ಬೈಕ್‌ಗಳನ್ನು ದಡಕ್ಕೆ ತಂದು ನಿಲ್ಲಿಸಿದರು.

ಪತ್ತೆಯಾದ ಬೈಕ್‌ಗಳು ಯಾರಿಗೆ ಸೇರಿವೆ, ಅವುಗಳನ್ನು ಎಲ್ಲಿಂದ ತಂದು ನದಿಗೆ ಎಸೆದಿದ್ದಾರೆ ಹಾಗೂ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!