Select Page

Advertisement

ಗೋಕಾಕ್ – ಭೀಕರ ರಸ್ತೆ ಅಪಘಾತ ; ಮಹಿಳೆ ಸಾವು

ಗೋಕಾಕ್ – ಭೀಕರ ರಸ್ತೆ ಅಪಘಾತ ; ಮಹಿಳೆ ಸಾವು


ಗೋಕಾಕ್ : ವೇಗವಾಗಿ ಬಂದ ಟ್ರ್ಯಾಕ್ಟರ್ ಇಲೆಕ್ಟ್ರಿಕಲ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಪ್ರಾಣ ಬಿಟ್ಟ ಘಟನೆ ಗೋಕಾಕ್ ತಾಲೂಕಿನ ಲೋಳಸೂರ ಬಸ್ ನಿಲ್ದಾಣದ ಹತ್ತಿ ಸಂಭವಿಸಿದೆ.

ಅನಿತಾ ಡೂಗನವರ (26) ಮೃತ ವಿವಾಹಿತೆ. ಶುಕ್ರವಾರ ಗೋಕಾಕ್ ರಸ್ತೆಯ ಸಂಗನಕೇರಿ ಕಡೆಗೆ ಇಲೆಕ್ಟ್ರಿಕಲ್ ಸ್ಕೂಟಿ ಮೇಲೆ ಅನಿತಾ ತೆರಳುತ್ತಿದ್ದರು. ಈ ವೇಳೆ ಕಬ್ಬು ತುಂಬಿಕೊಂಡು ಬಂದ ಟ್ರ್ಯಾಕ್ಟರ್ ಚಾಲಕ ಅಜಾಗರೂಕತೆಯಿಂದ ಅಪಘಾತ ಮಾಡಿದ್ದಾನೆ.‌

ಈ ವೇಳೆ ಸ್ಕೂಟರ್ ನಿಂದ ಬಿದ್ದ ಮಹಿಖೆಗೆ ಗಂಭೀರವಾಗಿ ಗಾಯವಾಗಿದ್ದು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!