ಅಜಿತ್ ಪವಾರ್ ಪತ್ನಿ ನಾಳೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಸಾಧ್ಯತೆ..!

ಮುಂಬೈ : ಬಾರಾಮತಿಯಲ್ಲಿ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಅಜಿತ್ ದಾದಾ ಪವಾರ್ ಅವರ ಸ್ಥಾನಕ್ಕೆ ನಾಳೆ ಡಿಸಿಎಂ ಆಗಿ ಸುನೇತ್ರಾ ಪವಾರ್ ( Sunetra pawar ) ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಜಿತ್ ಪವಾರ್ ಅವರ ನಿಧನದ ನಂತರದಲ್ಲಿ ಎನ್ ಸಿ ಪಿ (NCP) ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪಕ್ಷದ ನಾಯಕತ್ವವನ್ನು ಅಜಿತ್ ಪವಾರ ಅವರ ಪತ್ನಿ ಸುನೇತ್ರಾ ಪವಾರ್ ವಹಿಸಿಕೊಳ್ಳಬೇಕೆಂದು ಪಕ್ಷದ ಒಂದು ವರ್ಗ ಆಗ್ರಹಿಸಿದೆ.
ಇನ್ನೂ ನಾಳೆ ಡಿಸಿಎಂ ಹುದ್ದೆ ಅಲಂಕರಿಸುವ ನಿರ್ಧಾರವನ್ನು ಸುನೇತ್ರಾ ಅವರು ಈವರೆಗೂ ಅಧಿಕೃತವಾಗಿ ಪ್ರಕಟಿಸಿಲ್ಲ. ಒಂದುವೇಳೆ ಅವರು ಒಪ್ಪಿಕೊಳ್ಳದಿದ್ದರೆ ಅಜಿತ್ ಪವಾರ್ ಸ್ಥಾನಕ್ಕೆ ಪ್ರಪುಲ್ ಪಟೇಲ್ ಬರುವ ಸಾಧ್ಯತೆಯೂ ಇದೆ.
ಅಜಿತ್ ಪವಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಪುಲ್ ಪಟೇಲ್ (praful Patel ) ಕೇಂದ್ರ ಸರಕಾರದಲ್ಲಿಯೂ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡವರು.

