ಏಕನಾಥ ಶಿಂಧೆ ದೂರವಿಡಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್…! ಮುಂದೆ ಆಗಿದ್ದೇನು..?

ಮುಂಬೈ : ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಸಿದ್ಧಾಂತ ಏನೇ ಇರಲಿ ಆದರೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಯಾರು, ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಊಹೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹುದೇ ಒಂದು ಅಪರೂಪದ ಕ್ಷಣಕ್ಕೆ ಮಹಾರಾಷ್ಟ್ರ ಸಾಕ್ಷಿಯಾಗಿದೆ.
ಮಹಾರಾಷ್ಟ್ರದ ಡಿಸಿಎಂ ಏಕನಾಥ ಶಿಂಧೆ ಬೆಂಬಲಿಗರನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಭರ್ನಾಥ್ ಪುರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದೆ.
60 ಸದಸ್ಯ ಬಲದ ಅಂಬರನಾಥ್ ಪುರಸಭೆಗೆ ಡಿಸೆಂಬರ್ 20 ರಂದು ಚುನಾವಣೆ ನಡೆದಿತ್ತು. ಬಿಜೆಪಿ – 14, ಶಿವಸೇನೆ (ಶಿಂಧೆ ಬಣ) – 27, ಕಾಂಗ್ರೆಸ್ – 12, ಎನ್ ಸಿಪಿ – 4 ಹಾಗೂ ಪಕ್ಷೇತರ – 01 ಜಯಗಳಿಸಿದ್ದರು.
ಬಹುಮತಕ್ಕೆ 30 ಸ್ಥಾನದ ಅವಶ್ಯಕತೆ ಇದ್ದ ಹಿನ್ನಲೆಯಲ್ಲಿ ಏಕನಾಥ ಶಿಂಧೆ ಬಣದ ಶಿವಸೇನೆ ಅಧಿಕಾರ ಗದ್ದುಗೆ ಹಿಡಿಯುವುದನ್ನು ತಪ್ಪಿಸಲು ಬಿಜೆಪಿ ಕಾಂಗ್ರೆಸ್ ಎನ್ ಸಿಪಿ ಹಾಗೂ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳಲಾಗಿತ್ತು.
ಸಧ್ಯ ಈ ಮೈತ್ರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ 12 ಪುರಸಭೆ ಸದಸ್ಯರನ್ನು ಅಮಾನತು ಮಾಡಿದೆ. ಇನ್ನೂ ಈ ಮೈತ್ರಿಗೆ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಡಿಸಿಎಂ ಏಕನಾಥ ಶಿಂಧೆ ವಿರೋಧ ವ್ಯಕ್ತಪಡಿಸಿದ್ದು ಈ ರೀತಿಯ ಮೈತ್ರಿಗೆ ನಮ್ಮ ಸಹಮತ ಇಲ್ಲ ಎಂದು ಹೇಳಿದ್ದಾರೆ.

