Select Page

ಕೃಷಿ ಇಲಾಖೆ ಎಡಿ ಮನೆಯಲ್ಲಿ ಅಪಾರ ಅಕ್ರಮ ಆಸ್ತಿ ಪತ್ತೆ

ಕೃಷಿ ಇಲಾಖೆ ಎಡಿ ಮನೆಯಲ್ಲಿ ಅಪಾರ ಅಕ್ರಮ ಆಸ್ತಿ ಪತ್ತೆ



ವಿಜಯಪುರ : ಬಸವನಬಾಗೇವಾಡಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ 2.5 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಪಾರ ಅಕ್ರಮ ಆಸ್ತಿ ಪತ್ತೆಯಾಗಿದೆ.

ಈ ವೇಳೆ 29.42 ಲಕ್ಷ ನಗದು, ಬೆಳ್ಳಿ, ಬಂಗಾರದ ಆಭರಣ ಸೇರಿ ಒಟ್ಟು 2.5 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.


Advertisement

Leave a reply

Your email address will not be published. Required fields are marked *

error: Content is protected !!