ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ : ಹುಟ್ಟೂರಿನಲ್ಲಿ ನೀರವಮೌನ

ಬೆಳಗಾವಿ : ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಪಿಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಆಪ್ತ ಸ್ನೇಹಿತನನ್ನು ಕಳೆದುಕೊಂಡ ಸ್ನೇಹ ವರ್ಗ ಗೆಳೆಯನ ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಹುಟ್ಟುರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ. ಸಧ್ಯ ಇವರು ಬಾಲ್ಯದ ಬದುಕು ಸಾಗಿಸಿದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ದಿ. ಮಹಾಂತೇಶ್ ಬೀಳಗಿ ಅವರ ನಿವಾಸದ ಎದುರು ಜಮಾವಣೆಗೊಳ್ಳುತ್ತಿರುವ ಸಂಬಂಧಿಕರು ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸುತ್ತಿದ್ದಾರೆ. ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ.
ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳೆದಿದ್ದ ಮಹಾಂತೇಶ್ ಡಿಗ್ರಿ ವರೆಗೂ ರಾಮದುರ್ಗ ಓದಿ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ನಾಲ್ಕು ಜನ ಮಕ್ಕಳನ್ನು ಸಾಕಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ ರಾಜ್ಯಕ್ಕೆ ನಾಲ್ಕನೆ ರ್ಯಾಂಕ್ ಪಡೆಯುವ ಮೂಲಕ ಜನರ ಪ್ರೀತಿಯ ಅಧಿಕಾರಿಯಾಗಿದ್ದ ಎಂದು ಸ್ನೇಹಿತರು ಹಳೆ ನೆನಪು ಮೆಲುಕು ಹಾಕುತ್ತಿದ್ದಾರೆ.


