ಗೋಕಾಕ್ : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಗೋಕಾಕ್ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.‌

ಕಳೆದ ನವೆಂಬರ್‌ 1 ರಂದು ಗೋಕಾಕ್ ನಗರದ ಲಕ್ಷ್ಮೀ ಬಡಾವಣೆಯಲ್ಲಿನ ಅಶೋಕ್ ಗೊಂದಳಿ ಎಂಬುವವರ‌ ಮನೆಗೆ ನುಗ್ಗಿ 330 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 900 ಗ್ರಾಂ ತೂಕದ ಬೆಳ್ಳಿ ಆಭರಣ ಕದ್ದು ಆರೋಪಿಗಳು ಪರಾರಿಯಾಗಿದ್ದರು.

ಈ‌ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಬೆನ್ನಟ್ಟಿದ ಸಿಪಿಐ ಸುರೇಶ್ ಬಾಬು, ಪಿಎಸ್ಐ ಕಿರಣ್ ಮೋಹಿತೆ ಅವರ ತಂಡ ಆರೋಪಿಗಳಾದ ನಂದೀಶ್ ಸಕ್ರೆಪ್ಪಣ್ಣವರ, ನವೀನ್ ಮುಂಡರಗಿ, ರಮೇಶ್ ಅಡಗಿ ಎಂಬ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 7 ಲಕ್ಷ ‌ಮೌಲ್ಯದ ಬಂಗಾರದ ಆಭರಣ, 92 ಸಾವಿರ ಮೌಲ್ಯದ ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.