Video – ರೈತರ ಜೊತೆಗಿರುವೆ ಸರ್. ಗೃಹ ಸಚಿವ ಅಮಿತ್ ಶಾ ಕರೆಗೆ ವಿಜಯೇಂದ್ರ ಪ್ರತಿಕ್ರಿಯೆ..!
ಬೆಳಗಾವಿ : ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಶುಭಾಶಯ ತಿಳಿಸಿದರು.
ವಿಜಯೇಂದ್ರ ಅವರಿಗೆ ಶಾ ಕರೆ ಮಾಡಿದ್ದ ವೇಳೆ ರೈತರ ಜೊತೆಗಿರುವೆ ಎಂದು ಹೇಳಿದರು. ಈ ವೇಳೆ ಗೃಹ ಸಚಿವರು ವಿಜಯೇಂದ್ರಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,500 ರೂ ನೀಡುವಂತೆ ಆಗ್ರಹಿಸಿ ಕಳೆದ ಏಳು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ಸೇರಿದಂತೆ ಅನೇಕ ರಸ್ತೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

