ಅಥಣಿ : ಆಂಬ್ಯುಲೆನ್ಸ್ ಗೆ ದಾರಿಬಿಟ್ಟು ಮಾನವೀಯತೆ ಮೆರೆದ ರೈತ ಹೋರಾಟಗಾರರು
ಬೆಳಗಾವಿ : ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರ ಹೋರಾಟದ ಕಿಚ್ಚು ಎಲ್ಲೆಡೆ ವ್ಯಾಪಿಸಿದ್ದು ಅಥಣಿ – ಗೋಕಾಕ್ ರಸ್ತೆಯ ದರೂರ ಸೇತುವೆ ಮೇಲಿನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಕೃಷ್ಣಾ ನದಿಯ ದರೂರ ಸೇತುವೆ ಮೇಲಿನ ಸಂಚಾರ ತಡೆದ ಹಿನ್ನಲೆಯಲ್ಲಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಗಿತ್ತು. ಈ ವೇಳೆ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವ ಮೂಲಕ ರೈತ ಹೋರಾಟಗಾರರು ಮಾನವೀಯತೆ ಮೆರೆದಿದ್ದಾರೆ.
ಅಥಣಿ ತಾಲೂಕಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಗಳು ಬಂದ್ ಆಗಿದ್ದು ರೋಗಿಗಳು ಚಿಕಿತ್ಸೆಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಸಧ್ಯ ಅಥಣಿ ತಾಲೂಕಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

