
ನಾಯಿ ಬೊಗಳಿದರೆ ಉತ್ತರಿಸಲ್ಲ ; ಜೊಲ್ಲೆಯನ್ನು ನಾಯಿಗೆ ಹೋಲಿಸಿದ ನಿಖಿಲ್ ಕತ್ತಿ

ಬೆಳಗಾವಿ : ಬೊಗಳುವ ನಾಯಿಗೆ ನಾವು ಉತ್ತರಿಸಲ್ಲ, ಆನೆ ನಡೆದಾಗ ನಾಯಿ ಬೊಗಳುವುದು ಸಾಮಾನ್ಯ ಎಂದು ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಅಣ್ಣಾಸಾಹೇಬ್ ಜೊಲ್ಲೆಯನ್ನು ನಾಯಿಗೆ ಹೋಲಿಸಿದ್ದಾರೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಫಲಿತಾಂಶದ ನಂತರ ಪ್ರತಿಕ್ರಿಯೆ ನೀಡಿದ ಇವರು. ತಮ್ಮ ರಾಜಕೀಯ ವಿರೋಧಿಗಳಿಗೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದರು.
ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಚುನಾವಣೆ ಮಾಡಿದ್ದೇವೆ. ರಣತಂತ್ರ ಮಾಡಿದ್ದು ಅವರು, ಜನರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜಾರಕಿಹೊಳಿ ಸಹೋದರರಿಗೆ ತಿರುಗೇಟು ನೀಡಿದರು.