
ಹುಕ್ಕೇರಿ ಚುನಾವಣೆ : ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಕಲ್ಲು ತೂರಾಟ

ಬೆಳಗಾವಿ : ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಫಲಿತಾಂಶ ಹೊರಬಂದಿದದ್ದು ಮಾಜಿ ಸಂಸದ ರಮೇಶ್ ಕತ್ತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಇನ್ನೂ ಸಂಭ್ರಮಾಚರಣೆ ನಡುವೆ ಕತ್ತಿ ಬೆಂಬಲಿಗರು ಅತಿರೇಕದ ವರ್ತನೆ ತೋರಿದ್ದು ಸಚಿವ ಸತೀಶ್ ಜಾರಕಿಹೊಳಿ ಆಪ್ತರ ಕಾರಿಗೆ ಕೈಯಿಂದ ಗುದ್ದಿದ್ದು ಮಾತ್ರವಲ್ಲದೆ ಕಲ್ಲು ತೂರಾಟ ಮಾಡಿದ್ದಾರೆ.
ಕತ್ತಿ ಬೆಂಬಲಿಗರಿಂದ ಪೊಲೀಸರ ಮುಂದೆಯೇ ಸಂಭ್ರಮಾಚರಣೆ ವೇಳೆ ಘಡನೆ ನಡೆದಿದೆ. ಇನ್ನೂ ಎಲ್ಲಾ 15 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕತ್ತಿ ಬಣ ಮುನ್ನಡೆ ಕಾಯ್ದುಕೊಂಡಿತು.
ಚುನಾವಣಾ ಪೂರ್ವದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಜಾರಕಿಹೊಳಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಏಕವಚನದಲ್ಲೇ ವಿರೋಧಿಗಳ ವಿರುದ್ಧ ಹರಿಹಾಯ್ದಿದ್ದರು.