ನನ್ನ ಮೇಲೆ ಕೇಸ್ ಮಾಡಿದ್ದಾರೆ ; ಸವದಿ ವಿರುದ್ಧ ಕುಮಠಳ್ಳಿ ಗಂಭೀರ ಆರೋಪ
ಬೆಳಗಾವಿ : ನನ್ನ ನಿರ್ದೇಶಕ ಸ್ಥಾನದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರಕರಣ ನಡೆತುತ್ತಿದೆ. ಒಂದು ವೇಳೆ ಪ್ರಕರಣ ರದ್ದಾದರೆ ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಫರ್ಧೆ ಮಾಡುತ್ತೇನೆ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.
ಅಥಣಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಇವರು. ರಾಜಕೀಯ ಹೊರಗಿಟ್ಟು ಡಿಸಿಸಿ ಅಧಿಕಾರ ನಡಿಸುತ್ತೇನೆ ಎಂದು ಹೇಳುವವರು ನಾವು ಆರಂಭಿಸಿರುವ ಸೊಸೈಟಿಗಳಿಗೆ ಹಣ ನೀಡದೆ ರಾಜಕಾರಣ ಮಾಡಲಾಗುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಅಧಿಕಾರಾವಧಿಯಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಜಾರಿಗೆ ಬಂದಿತ್ತು. ಆದರೆ ಸ್ವಾಭಿಮಾನ ಬಿಟ್ಟು ಯೋಜನೆ ನಾನು ತಂದಿರುವೆ ಎಂದು ಲಕ್ಷ್ಮಣ ಸವದಿ ಹೇಳಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ನಿಶ್ಚಿತ. ಒಂದುವೇಳೆ ನಾನು ಸ್ಪರ್ಧೆ ಮಾಡದಿದ್ದರೆ, ಒಳ್ಳೆಯ ವ್ಯಕ್ತಿಯನ್ನು ಸ್ಫರ್ಧೆ ಮಾಡಿಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ಮಹೇಶ್ ಕುಮಠಳ್ಳಿ ಬಹಿರಂಗವಾಗಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಹೊರಹಾಕಿದರು.


