ಅಥಣಿ : ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ಕಳ್ಳಾಟ ; ನರೇಗಾ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ..!
ಅಥಣಿ : ನರೇಗಾ ಕಾಮಗಾರಿಯುಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ ಬಡ ಕೂಲಿ ಕಾರ್ಮಿಕರಿಗೆ ಮೋಸ ಎಸಗರುವ ಗಂಭೀರ ಆರೋಪ, ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಕೇಳಿಬಂದಿದೆ.
ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾದೇವ ಮೇತ್ರೆ ಎಂಬುವವರು ತಮ್ಮ ಜಮೀನಿನಲ್ಲಿ ನರೇಗಾ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕೂಲಿ ನೀಡದೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಧ್ಯಕ್ಷ ನರೇಗಾ ಕಾರ್ಮಿಕರನ್ನು ಕರೆದುಕೊಂಡು ಬೇರೆ ಸ್ಥಳದಲ್ಲಿ ಜಿಪಿಎಸ್ ಮಾಡಿಸಿ ನಂತರ ತನ್ನ ತೋಟದಲ್ಲಿ ದುಡಿಸಿಕೊಂಡಿದ್ದಾನೆ. ಇನ್ನೂ ಕೂಲಿ ಹಣವನ್ನು ಕೆಲವೇ ಕಾರ್ಮಿಕರ ಖಾತೆ ಜಮೆ ಮಾಡಿ ಇನ್ನುಳಿದವರಿಗೆ ಮೋಸ ಮಾಡಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷನ ಜೊತೆ ಪಿಡಿಒ ಸೇರಿ ಈ ರೀತಿಯ ಭ್ರಷ್ಟಾಚಾರ ಎಸಗಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ.


