Select Page

Advertisement

ಧರ್ಮಸ್ಥಳ ವಿರುದ್ಧ ಅಪಪ್ರಚಾರ ; ಸಿಡಿದೆದ್ದ ಹಿಂದೂ ಸಮಾಜ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ; ಸಿಡಿದೆದ್ದ ಹಿಂದೂ ಸಮಾಜ

ಅಥಣಿ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿ ಜನರ ಧಾರ್ಮಿಕ ನಂಬಿಕೆಗೆ ಭಂಗ ತರುವ ದುರುದ್ದೇಷಪೂರಿತ ಕೃತ್ಯವನ್ನು ನಿಲ್ಲಿಸುವಂತೆ ಆಗ್ರಹಿಸಿ ಅಥಣಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಹಾಗೂ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಈ ವೇಳೆ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ  ಅರವಿಂದರಾವ ದೇಶಪಾಂಡೆ ಮಾತನಾಡಿ ನಾಡಿನ ಜನರ ಶ್ರದ್ಧಾ ನಂಬಿಕೆಯ ಕೇಂದ್ರವಾಗಿರುವ ಧರ್ಮಸ್ಥಳದೆ ವಿರುದ್ಧ ಅನಾಮಿಕ ವ್ಯಕ್ತಿಗಳನ್ನು ಬಳಸಿಕೊಂಡು ಕೆಲ ಅಧರ್ಮಿಗಳು ಕುತಂತ್ರ ನಡೆಸಿ, ಕೇವಲ ಧಾರ್ಮಿಕ ಕಾರ್ಯ ಅಷ್ಟೇ ಅಲ್ಲದೇ ಆರ್ಥಿಕ, ಸಾಮಾಜಿಕ, ವೈದ್ಯಕಿಯ, ಶಿಕ್ಷಣ, ಕೃಷಿ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅತ್ಯಂತ ಶಿಸ್ತುಬದ್ಧ ಕಾರ್ಯ ನಿರ್ವಹಿಸುತ್ತಿರುವ ಈ ಕ್ಷೇತ್ರದ ಹೆಸರು ಹಾಳು ಮಾಡುವವರನ್ನು ಮಟ್ಟ ಹಾಕಿ. ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು.
 
ಸಾಮಾಜಿಕ ಕಾರ್ಯಕರ್ತೆ ಗೀತಾ ಮಡ್ಡಿ ಮಾತನಾಡಿ  
 ರಾಜ್ಯದಲ್ಲಿ  ನಮ್ಮಂತಹ  ಲಕ್ಷಾಂತರ  ಮಹಿಳೆಯರಿಗೆ ಸ್ವಾವಲಂಬಿ  ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಿದ್ದು, ಧರ್ಮಸ್ಥಳದ ಸಂಘದ ಸಹಾಯ ಸಹಕಾರ ನಾವು ಆರ್ಥಿಕವಾಗಿ ಸುಧಾರಿಸಿಕೊಂಡಿದ್ದು, ಆರೋಗ್ಯಯುತ ಜೀವನ ಪಾಠವನ್ನು ಕಲಿಸಿದೆ. ಇಂತಹ ಪುಣ್ಯ ಕ್ಷೇತ್ರಕ್ಕೆ ದಕ್ಕೆ ತರುವವರನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಉನ್ನತ ಮಟ್ಟದ ತನಿಖೆಯನ್ನು ನಡೆಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು.

ಭಾರತೀಯ ಜೈನ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಅರುಣ ಯಲಗುದ್ರಿ  ಮಾತನಾಡಿ ಯಾವುದೇ ಜಾತಿ ಮತಗಳು ಎನಿಸದೇ ನಮ್ಮ ನಾಡಿನಲ್ಲಿ ಧರ್ಮಸ್ಥಳ ಕ್ಷೇತ್ರದ ಮೂಲ ಆರೋಗ್ಯ, ಸರ್ಕಾರಿ ಶಾಲೆಗಳ ರಕ್ಷಣೆ, ದೇವಸ್ಥಾನಗಳ ಜೀರ್ನೊದ್ದಾರೆ, ಸ್ಮಶಾನಗಳ ಅಭಿವೃದ್ಧಿ, ಹೈನುಗಾರಿಗೆ ಹೀಗೆ ಧಾರ್ಮಿಕ ಕಾರ್ಯಗಳ ಜೋತೆ ಜೋತೆಯಲ್ಲಿ ಇಂತಹ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದ ಹೇಡಿಗಳ ಈ ಕೃತ್ಯಕ್ಕೆ  ಕೈ ಹಾಕಿದ್ದಾರೆ. 

ಧರ್ಮಸ್ಥಳ ಕ್ಷೇತ್ರದ ವಿರುದ್ಧ  ಮತ್ತು  ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರುವ ಉದ್ದೇಶದಿಂದ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಯಾರೇ ತಪ್ಪು ಮಾಡಿದರೂ ಸಹ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು  ಒತ್ತಾಯಿಸಿದರು.

ಯುವ ಮುಖಂಡ  ಚಿದಾನಂದ ಸವದಿ ಮಾತನಾಡಿ  ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಅತ್ಯಂತ ಪ್ರಸಿದ್ಧವಾದ ಪುಣ್ಯಕ್ಷೇತ್ರ ಅದರ ಹೆಸರನ್ನು ಕೆಡಿಸಲು ಕೆಲವು ವ್ಯಕ್ತಿಗಳು ನಿರಾಧಾರ ಆರೋಪಗಳನ್ನ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಅತ್ಯಂತ ಹೇಯ ಕೃತ್ಯ ಅಂತಹ ಅಪರಾಧ ಮನೋಭಾವ ಇರುವ ವ್ಯಕ್ತಿಗಳನ್ನು ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದರು.
   
ಈ ವೇಳೆ ಮುಖಂಡರಾದ  ಸದಾಶಿವ ಬುಟಾಳೆ, ಉಮೇಶರಾವ ಬೊಂಟಡಕರ, ಅಮರ ದುರ್ಗಣ್ಣವರ, ಸಂಜು ತಳವಲಕರ, ಸಂಜಯ್ ನಾಡಗೌಡ, ಅಭಯ ಕೊಪ್ಪ, ಪುಟ್ಟು ಹಿರೇಮಠ, ವಿನೋದ ಶೆಟ್ಟಿ, ಅಶೋಕ ದಾನಗೌಡರ
, ಶರಥ ಶೇಟ್ಟಿ, ಡಿ ಡಿ ಮೆಕನಮರಡಿ, ರಾಘವೇಂದ್ರ ಶೆಟ್ಟ, ಪ್ರಕಾಶ ಕೋಳಿ, ಶೇಖರ ಕನಕರೆಡ್ಡಿ, ದೀನೆಶ ಶೆಟ್ಟಿ , ಡಾ. ಸಿ. ಎ ಸಂಕ್ರಟ್ಟಿ, ಸಂದೀಪ್ ಶೆಟ್ಟಿ, ಅನಂತ ಪಡನಾಡ, ಸೇರಿದಂತೆ ಎಲ್ಲ ಸಮಾಜದ ಮಹಿಳೆಯರು,  ಮುಖಂಡರು ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!