Select Page

Advertisement

ಬೆಳಗಾವಿ ಹೆದ್ದಾರಿಯಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರ ಹೆಡೆಮುರಿ ಕಟ್ಟಿದ ನಗರ ಪೊಲೀಸ್

ಬೆಳಗಾವಿ ಹೆದ್ದಾರಿಯಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರ ಹೆಡೆಮುರಿ ಕಟ್ಟಿದ ನಗರ ಪೊಲೀಸ್

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ತಾಲೂಕಿನ ಶಿವಾಜಿ ವಂಟಮೂರಿ, ವಿಶಾಲ್ ಮಾಸ್ತಿ, ಭೀಮರಾಯ ಕರಿಕಟ್ಟಿ ಹಾಗೂ ಮಾರುತಿ ಹಂಚಿನಮನಿ ಆರೋಪಿಯನ್ನು ಕಾಕತಿ ಪೊಲೀಸರು ಬಂದಿಸಿದ್ದಾರೆ ಎಂದರು.

ಭೀರಪ್ಪ‌ ಎಂಬ ಲಾರಿ ಚಾಲಕ ಸಂಕೇಶ್ವರದಿಂದ ಬೆಳಗಾವಿಗೆ ಬರುವಾಗ ವಂಟಮೂರಿಯಲ್ಲಿ ಕೆಲ ಯುವಕರು ಬೈಕ್ ಮೇಲೆ ಬಂದು ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಇವರು ಕಳ್ಳತನ ಮಾಡಿದ ಮೊಬೈಲ್ ಹಾಗೂ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!