Select Page

Advertisement

ಐತಿಹಾಸಿಕ ದಾಖಲೆ‌ ಬರೆದ ಪ್ರಧಾನಿ ಮೋದಿ ; ಇಂದಿರಾ ದಾಖಲೆ‌ ಮುರಿದ ನಮೋ….!

ಐತಿಹಾಸಿಕ ದಾಖಲೆ‌ ಬರೆದ ಪ್ರಧಾನಿ ಮೋದಿ ; ಇಂದಿರಾ ದಾಖಲೆ‌ ಮುರಿದ ನಮೋ….!

ನವದೆಹಲಿ : ಗುಜರಾತ್ ಮುಖ್ಯಮಂತ್ರಿಯಿಂದ ಹಿಡಿದು ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತೊಂದು ಐತಿಹಾಸಿಕ ದಾಖಲೆ‌ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜುಲೈ 25 ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸತತವಾಗಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಎರಡನೇಯವರಾಗಿ ದಾಖಲೆ ಬರೆದಿದ್ದಾರೆ. ದಿ. ಇಂದಿರಾ ಗಾಂಧಿ ಅವರ ದಾಖಲೆ ಮುರಿದು ಸಾಧನೆ ಮಾಡಿದ್ದಾರೆ.

ಇಂದಿರಾಗಾಂಧಿ ಅವರು 1966 ರ ಜನೆವರಿ 24 ರಿಂದ ಮಾರ್ಚ್ 24 ರ 1977 ರ ವರೆಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಒಟ್ಟು 11 ವರ್ಷ 59 ದಿನಗಳವರೆಗೆ ಅಧಿಕಾರದಲ್ಲಿದ್ದರು. ಸಧ್ಯ ಇವರ ದಾಖಲೆ‌ ಮುರಿದಿರು ಪ್ರಧಾನಿ ನರೇಂದ್ರ ಮೋದಿಯವರು ಮೇ. 26 ರ 2014 ರಿಂದ ಈವರೆಗೆ ಒಟ್ಟು 11 ವರ್ಷ 60 ದಿನ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಇನ್ನೂ ದೇಶದಲ್ಲಿ ನಿರಂತರ ಅತೀ ಹೆಚ್ಚು ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ಕೀರ್ತಿ ಜವಾಹರಲಾಲ್ ನೆಹರು ಅವರಿಗೆ ಸಲ್ಲುತ್ತದೆ. ಆಗಸ್ಟ್ 15, 1947 ರಿಂದ‌ ಮೇ 27, 1964 ರ ವರೆಗೆ ಒಟ್ಟು 16 ವರ್ಷ 286 ದಿನಗಳ ಕಾಲ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!