ಅಥಣಿ ಹಿಡ್ ಆ್ಯಂಡ್ ರನ್ ಗೆ ಬಾಲಕ ಅಗಸ್ತ್ಯ ಬಲಿ
ಅಥಣಿ : ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಅಪರಿಚಿತ ಕಾರು ಹಾಯ್ದ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಗಸ್ತ್ಯ ವಿಜಯಕುಮಾರ ಕಣಮಡಿ (10) ಮೃತ ದುರ್ದೈವಿ. ಅಥಣಿಯಿಂದ ಜಮಖಂಡಿ ರಸ್ತೆ ಮಾರ್ಗದಲ್ಲಿ ಮಗು ನಡೆದುಕೊಂಡು ಹೋಗುವ ವೇಳೆ ಕಾರು ಹಾಯ್ದು ಹೋಗಿದೆ.
ಸಿಸಿಟಿವಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಪರಾರಿಯಾಗಿದ್ದ ಕಾರು ಚಾಲಕ ಅಥಣಿ ಮೂಲದ ರಾಹುಲ ಸುರೇಂದ್ರ ಹುಂಡೇಕರ ಎಂದು ತಿಳಿದುಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಅಥಣಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.


