ಗೋಕಾಕ್ : ಮದುವೆಗೆ ಒಪ್ಪದ ಪೋಷಕರು ; ಆತ್ಮಹತ್ಯೆ ಮಾಡಿಕೊಂಡ ಜೋಡಿ ಹಕ್ಕಿಗಳು
ಗೋಕಾಕ್ : ತಾನು ಓಡಿಸುತ್ತಿದ್ದ ಆಟದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ರಾಘವೇಂದ್ರ ಜಾಧವ್ (28), ರಂಜೀತಾ ಚೋಬರಿ (26) ಮೃತ ದುರ್ದೈವಿಗಳು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ನಿವಾಸಿಗಳಾಗಿದ್ದ ಇವರು ಪರಸ್ಪರ ಪ್ರೀತಿಸುತ್ತಿದ್ದರು.
ರಾಘವೇಂದ್ರನನ್ನು ಪ್ರೀತಿಸುತ್ತಿದ್ದ ರಂಜೀತಾ ಚೋಬರಿ ಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು. ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ಒಪ್ಪದ ಹಿನ್ನಲೆಯಲ್ಲಿ ಮನನೊಂದು ಯುವತಿ ಬೇಸರಗೊಂಡಿದ್ದಳು.
ಇನ್ನೇನು ಮನೆಯಲ್ಲಿ ನಿಶ್ಚಿತಾರ್ಥ ನಂತರ ಮದುವೆಗೆ ಸಿದ್ದರಾಗುತ್ತಾರೆ ಎಂದು ತಿಳಿದ ರಂಜೀತಾ ತಾನು ಪ್ರೀತಿಸಿದ ಹುಡುಗನ ರಾಘವೇಂದ್ರನ ಜೊತೆ ನಿರ್ಜನ ಪ್ರದೇಶಕ್ಕೆ ತೆರಳಿ ಆಟೋದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಗೋಕಾಕ್ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.


