ಹುಬ್ಬಳ್ಳಿ : ಶಿಕ್ಷಕಿಯ ಅಶ್ಲೀಲ ವೀಡಿಯೋ ಇಟ್ಕೊಂಡು ಮದುವೆ ಮಾಡ್ಕೊ ಎಂದು ಟಾರ್ಚರ್
ಹುಬ್ಬಳ್ಳಿ : ಶಿಕ್ಷಕಿಯ ಖಾಸಗಿ ಕ್ಷಣಗಳ ವೀಡಿಯೋ ಇಟ್ಟುಕೊಂಡು ತನ್ನನ್ನು ಮದುವೆಯಾಗುವಂತೆ ಕಾಡಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಾಧ್ಯಾಪಕಿಯೊಬ್ಬರ ಅಶ್ಲೀಲ ವಿಡಿಯೋ, ಫೋಟೋ ಹಾಗೂ ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿರುವುದು ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಶಶಿ (25) ಎಂಬಾತ ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋ, ಪೋಟೊ ಇಟ್ಟುಕೊಂಡು ಮದುವೆ ಆಗುವಂತೆ ಪೀಡಿಸಿದ್ದಾನೆ.
ಪ್ರಾಧ್ಯಾಪಕಿಯ ಸಹೋದರನಿಗೆ ಇವುಗಳನ್ನು ಕಳಹಿಸಿದ್ದಾನೆ. ಸಹದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಾಟ್ಸಾಪ್ ಮೂಲಕ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


