ವೀರೇಶ್ವರ ಶ್ರೀಗಳ ಮೌನ ಲಿಂಗಾನುಷ್ಠಾನ ಸಂಪನ್ನ
ಚ.ಕಿತ್ತೂರು : ಲೋಕ ಕಲ್ಯಾಣಾರ್ಥವಾಗಿ ಶ್ರೀ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀಗಳು ಕೈಗೊಂಡಿದ್ದು ಒಂದು ತಿಂಗಳವರೆಗಿನ ಮೌನ ಲಿಂಗಾನುಷ್ಠಾನ ಇದೇ ಗುರುವಾರ ಸಂಪನ್ನಗೊಂಡಿತು.
ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಜೇಷ್ಠ ಮಾಸದಂದು ಒಂದು ತಿಂಗಳವರೆಗೆ ಮೌನ ಲಿಂಗಾನುಷ್ಠಾನ ಕೈಗೊಂಡಿದ್ದರು. ಇದೇ ಗುರಿವಾರ ಶ್ರೀಮಠದಲ್ಲಿ ಅನುಷ್ಠಾನದ ಸಮಾರೋಪ ಸಮಾರಂಭ ಹಾಗೂ ಧರ್ಮ ಸಭೆ ಹಾಗೂ ಶ್ರೀಗಳ ತುಲಾಭಾರ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ಈ ವೇಳೆ ಶ್ರೀಗಳಿಗೆ ಹೆಬ್ಬಾಳ ಗ್ರಾಮಸ್ಥರಿಂದ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ಮುರಗೋಡದ ಶ್ರೀ ಮ ನಿ ಪ್ರ ನೀಲಕಂಠ ಮಹಾಸ್ವಾಮೀಜಿ,
ಹೊಸೂರಿನ ಗಂಗಾಧರ ಮಹಾಸ್ವಾಮಿಜಿ, ದೇಗುಲ ಹಳ್ಳಿಯ
ವೀರೇಶ್ವರ ಮಹಾಸ್ವಾಮೀಜಿ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಟೀಲ್, ಮಾಜಿ ಶಾಸಕ ಮಹಾಂತೇಶ್ ದೊಡ್ಡನಗೌಡರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.
ಪೋಟೋ : ಅನುಷ್ಠಾನ ಕೈಗೊಂಡ ವೀರೇಶ್ವರ ಶ್ರೀಗಳಿಗೆ ಭಕ್ತರಿಂದ ತುಲಾಭಾರ ಸೇವೆ


