Select Page

Advertisement

ಹೆಲ್ಮೆಟ್ ಗಾಗಿ ಚಲಿಸುತ್ತಿದ್ದ ಬೈಕ್ ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ; ಆಯತಪ್ಪಿ ಕೆಳಗೆ ಬಿದ್ದ ಮಗು ಸಾವು

ಹೆಲ್ಮೆಟ್ ಗಾಗಿ ಚಲಿಸುತ್ತಿದ್ದ ಬೈಕ್ ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ; ಆಯತಪ್ಪಿ ಕೆಳಗೆ ಬಿದ್ದ ಮಗು ಸಾವು

ಮಂಡ್ಯ : ಹೆಲ್ಮೆಗ್ ಗಾಗಿ ಚಲಿಸುತ್ತಿದ್ದ ಬೈಕ್ ತಡೆಯಲು ಹೋದ ಸಂದರ್ಭದಲ್ಲಿ ಮೂರುವರೆ ವರ್ಷದ ಮಗು ಆಯತಪ್ಪಿ ಬಿದ್ದು ಸಾವಣಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊರವನಹಳ್ಳಿಯಲ್ಲಿ ನಡೆದಿದೆ.

ಮೂರೂವರೆ ವರ್ಷದ ಹೃತೀಕ್ಷ ಎಂಬ ಮಗುವಿಗೆ ನಾಯಿ ಕಚ್ಚಿದೆ ಎಂದು ಪೋಷಕರು ಬೈಕ್ ಮೇಲೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ತಪಾಸಣೆಗೆಂದು ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಮಗಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ. ಇನ್ನೂ, ಮುದ್ದಾದ ಮಗುವನ್ನು ಕಳೆದುಕೊಂಡು ಪೋಷಕರು ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಶವವಿಟ್ಟು ಅಳುತ್ತಿದ್ದಾರೆ. ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಮಗು ಶವವಿಟ್ಟು ಪೋಷಕರ ಗೋಳಾಟ ಹೇಳತೀರದು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!