Select Page

Advertisement

ತಾಳಿ ಕಟ್ಟಿಸಿಕೊಳ್ಳುವಾಗ ಮದುವೆ ನಿರಾಕರಣೆ ; ಸಂಜೆ ಪ್ರಿಯಕರನ ಜೊತೆ ಮದುವೆ

ತಾಳಿ ಕಟ್ಟಿಸಿಕೊಳ್ಳುವಾಗ ಮದುವೆ ನಿರಾಕರಣೆ ; ಸಂಜೆ ಪ್ರಿಯಕರನ ಜೊತೆ ಮದುವೆ

.

ಹಾಸನ : ಮದುವೆ ಮನೆಯಲ್ಲಿ ತಾಳಿ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ಮದುವೆ ನಿರಾಕರಿಸಿದ್ದ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದ್ದು, ಈಗ ಅದೇ ಯುವತಿ ಪ್ರೀತಿಸಿದವನ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.‌

ಮದುವೆ ಮನೆಯಿಂದಲೇ ಮದುವೆ ಮುರಿದ ಪಲ್ಲವಿ, ಶುಕ್ರವಾರ ಸಂಜೆ ತನ್ನ ಪ್ರಿಯಕರ ರಘು ಜೊತೆ ದೇವಸ್ಥಾನದಲ್ಲಿ ಮದುವೆಯಾದರು.

ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಸರಳವಾಗಿ ತನ್ನ ಸ್ನೇಹಿತರೊಂದಿಗೆ ಆಗಮಿಸಿದ ಪಲ್ಲವಿ ವಿವಾಹವಾದರು.

ಪಲ್ಲವಿ ಮದುವೆ ನಿರಾಕರಿಸಿದ ಕಲ್ಯಾಣ ಮಂಟಪದ ಆವರಣದಲ್ಲೇ ಈ ದೇವಾಲಯವಿದೆ. ಯುವತಿಯ ಮನೆಯಲ್ಲಿ ಪೋಷಕರ ಕಣ್ಣೀರು ನಿಲ್ಲದಿದ್ದರೂ ಕೆಲ ಸ್ನೇಹಿತರು, ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಗೋಧೂಳಿ ಲಗ್ನದಲ್ಲಿ ವಿವಾಹ ನೆರೆವೇರಿದೆ. ರಘು ಹಾಸನದ ಬಸವನಹಳ್ಳಿ ಗ್ರಾಮದ ನಿವಾಸಿಯಾದರೆ, ಪಲ್ಲವಿ ಭುವನಹಳ್ಳಿ ಗ್ರಾಮದವರು

Advertisement

Leave a reply

Your email address will not be published. Required fields are marked *

error: Content is protected !!