Select Page

Advertisement

ರಾಕೇಶ್ ಪೂಜಾರಿ ಸಾವು : ಕಾಂತಾರ ಮತ್ತು ರಿಷಭ್ ಶೆಟ್ಟಿ…!

ರಾಕೇಶ್ ಪೂಜಾರಿ ಸಾವು : ಕಾಂತಾರ ಮತ್ತು ರಿಷಭ್ ಶೆಟ್ಟಿ…!



ಬೆಂಗಳೂರು : ಹಾಸ್ಯ ಕಲಾವಿದ ಹಾಗೂ ಕಾಮಿಡಿ ಕಿಲಾಡಿ ಕಾರ್ಯಕ್ರಮ ಖ್ಯಾತಿಯ ರಾಕೇಶ್ ಪೂಜಾರಿ ಸಾವಿನ ಸುತ್ತ ಹಲವಾರು ಊಹಾಪೋಹ ಓಡಾಡುತ್ತಿವೆ. ಈ ಮಧ್ಯೆ ಕಾಂತಾರ ಸಿನೆಮಾ ‌ನಟ ರಿಷಭ್ ಶೆಟ್ಟಿ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದೆ.

ಹೌದು ಕನ್ನಡದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುವುದಕ್ಕೆ ಭರ್ಜರಿ ಸಿದ್ಧತೆಗಳು ನಡದಿರುವಾಗಲೇ ಒಂದರ ಹಿಂದೆ ಒಂದು ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಕಾಂತಾರ – 1 ಚಿತ್ರೀಕರಣ ವೇಳೆ ಅನೇಕ ಸಂಕಷ್ಟಗಳು ಎದುರಾಗಿವೆ ಎಂದು ಹೇಳಲಾಗುತ್ತಿದೆ. ಪದೇ, ಪದೇ ಈ ರೀತಿಯ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈಚೆಗೆ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದ ಕಾಂತಾರ ಸಿನಿಮಾದ ಸಹಕಲಾವಿದ ಎಂ.ಎಫ್‌ ಕಪಿಲ್‌ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಕಳೆದ ನವೆಂಬರ್‌ನಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ತೆರಳುವಾಗ 20 ಜ್ಯೂನಿಯರ್ ಕಲಾವಿದರಿದ್ದ ಮಿನಿ ಬಸ್‌ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್ ಎನ್ನುವ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿತ್ತು. ಇದರಲ್ಲಿ 5 ಜನ ಕಲಾವಿದರೆ ಸಣ್ಣಪುಟ್ಟ ಗಾಯಗಳಾಗಿತ್ತು.

ಈ ಸಿನಿಮಾದ ಸಹ ಕಲಾವಿದ ಹಾಗೂ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿತ್ರತಂಡವು ನಿರಂತವಾಗಿ ಸಮಸ್ಯೆ ಎದುರಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿರುವಾಗಲೇ ಚಿತ್ರತಂಡದ ಈ ಬಗ್ಗೆ ಮಹತ್ವದ ಸ್ಪಷ್ಟನೆ ಬಂದಿದೆ.

ರಿಷಭ್ ಶೆಟ್ಟಿ ವಿರುದ್ಧ ಆಕ್ರೋಶ : ಕಾಂತಾರ – 1 ರಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಾವಿನ ನಂತರ ಅವರ ಅಂತಿಮ ದರ್ಶನಕ್ಕೆ ನಟ ರಿಷಭ್ ಶೆಟ್ಟಿ ಏಕೆ ಬರಲಿಲ್ಲ ಎಂಬ ಪ್ರಶ್ನೆ ಜೋರಾಗಿವೆ. ತನ್ನ ಚಿತ್ರದಲ್ಲಿ ನಟಿಸುತ್ತಿದ್ದ ಕಲಾವಿದನಿಗೆ ಏಕೆ ಗೌರವ ನೀಡಲಿಲ್ಲ ಎಂದು ಶೆಟ್ಟಿ ವಿರುದ್ಧ ಆಕ್ರೋಶ ಎದುರಾಗಿದೆ.

ಚಿತ್ರತಂಡ ಸ್ಪಷ್ಟನೆ : ಕಾಂತಾರ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ ಎನ್ನುವ ಆರೋಪದ ನಡುವೆಯೇ ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕಾಂತಾರದಿಂದ ಈ ದುರಂತವಾಗಿಲ್ಲ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಆಗಿಲ್ಲ. ಚಿತ್ರದ ಚಿತ್ರೀಕರಣವು ಕೊನೆಯ ಹಂತದಲ್ಲಿದ್ದು, ವಿಜಯದಶಮಿಗೆ ಕಾಂತಾರ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಸ್ಪಷ್ಟನೆ ನೀಡಿದೆ.



Advertisement

Leave a reply

Your email address will not be published. Required fields are marked *

error: Content is protected !!