ಪೋಸ್ಟ್ ಮಾಡಿ ಮರ್ಯಾದೆ ಕಳೆದುಕೊಂಡ ರಾಜ್ಯ ಕಾಂಗ್ರೆಸ್
ಬೆಂಗಳೂರು : ಇರಲಾರದೆ ಇರುವೆ ಬಿಟ್ಕೊಂಡರು ಎನ್ನುವಂತೆ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಆಗಿದೆ. ಆಕಡೆ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ದಾಳಿ ನಡೆಸುತ್ತಿದ್ದರೆ, ಇತ್ತ ರಾಜ್ಯ ಕಾಂಗ್ರೆಸ್ ತನ್ನ ಫೇಸ್ಬುಕ್ ಖಾತೆಯಲ್ಲಿ ಗಾಂಧಿ ಪೋಟೋ ಹಾಕಿಕೊಂಡು ಶಾಂತಿ ಮಂತ್ರ ಹೇಳಿದೆ.
ಹೌದು ಕರ್ನಾಟಕ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಪೋಸ್ಟ್ ಆಗಿದ್ದು ಮನುಕುಲದ ಅತ್ಯಂತ ಶಾಂತಿಯುತ ಅಸ್ತ್ರ ಎಂದರೆ ಶಾಂತಿ ಎಂದು ಪೋಸ್ಟ್ ಹಾಕಿಕೊಂಡಿದೆ. ಸಧ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ಸೇನೆ ಪಾಕಿಸ್ತಾನ ಮೇಲೆ ದಾಳಿ ಮಾಡಿದೆ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್ ಪೋಸ್ಟ್ ಡಿಲಿಟ್ ಮಾಡಿದೆ. ಕೆಲ ದಿನಗಳ ಹಿಂದೆ ಮೋದಿ ಅವರ ತಲೆ ಇಲ್ಲದ ಪೋಟೋ ಹಾಕಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಡಿಲಿಟ್ ಮಾಡಿತ್ತು.
ಭಯೋತ್ಪಾದಕರ ಆಶ್ರಯ ತಾಣವಾಗಿದ್ದ 200 ಎಕರೆ ವಿಸ್ತೀರ್ಣದ ಕಾಂಪ್ಲೆಕ್ಸ್ ಒಂದನ್ನು ಭಾರತೀಯ ಸೇನೆ ನೆಲಕ್ಕೆ ಉರುಳಿಸಿದೆ. ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ ನಿರಂತರ ಏರಿಕೆಯಾಗುತ್ತಿದ್ದು, ಭಾರತೀಯ ಸೇನೆ ಹದ್ದಿಣ ಕಣ್ಣು ಮುಂದುವರಿದಿದೆ.


