ಯುದ್ಧಕ್ಕೆ ಹೆದರಿ ಆಸ್ಪತ್ರೆ ಸೇರಿದ ಪಾಕಿಸ್ತಾನ ಪ್ರಧಾನಿ…?
ಲಾಹೋರ್ : ಭಾರತ ಹಾಗೂ ಪಾಕಿಸ್ತಾನ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಹೆಚ್ಚಾಗಿದ್ದು ಯಾವುದೇ ಕ್ಷಣದಲ್ಲಿ ಯುದ್ಧವಾಗುವ ಸಾಧ್ಯತೆ ಇದೆ. ಈ ಮಧ್ಯೆ ಪಾಕ್ ಪ್ರಧಾನಿ ಆಸ್ಪತ್ರೆ ಸೇರಿದ್ದಾನೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಚಳಿ ಜ್ವರದ ಕಾರಣಕ್ಕೆ ಆಸ್ಪತ್ರೆ ಸೇರಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಭಾರತ ಯುದ್ಧ ಮಾಡುತ್ತದೆ ಎಂಬ ಭಯಕ್ಕೆ ಪಾಕ್ ಪ್ರಧಾನಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ರೀತಿಯಲ್ಲಿ ಜನ ಆಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟೇ ಅಲ್ಲದೆ ಪಾಕಿಸ್ತಾನ ದೇಶದ ವಿರುದ್ಧ ಅವರದೇ ಸೈನಿಕರು ತಿರುಗಿ ಬಿದ್ದಿದ್ದಾರೆ. 4500 ಸೈನಿಕರು ಹಾಗೂ 250 ಅಧಿಕಾರಿಗಳು ಪಲಾಯನ ಮಾಡಿದ್ದಾರೆ ಎಂಬ ವರದಿಯಾಗಿದೆ. ತಮ್ಮ ಪ್ರೀತಿಪಾತ್ರರ ಕಾಳಜಿ ಹಿನ್ನಲೆಯಲ್ಲಿ ಸೈನಿಕರು ವಾಪಸ್ಸಾಗಿರುವ ಸುದ್ದಿ ಜೋರಾಗಿದೆ.


